ಚೆನ್ನೈ, ಏ.12 (DaijiworldNews/HR): ದೃಷ್ಟಿ ಕಡಿಮೆ ಇರುವ ಮಹಿಳೆಯೊಬ್ಬರು ಮಹಿಳೆ ನೀರು ಎಂದು ಭಾವಿಸಿ ಆ್ಯಸಿಡ್ ಸೇವಿಸಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆನ್ನೈಯಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಮೃತ ಮಹಿಳೆಯನ್ನು 51 ವರ್ಷದ ಮೇನಕಾ ಎಂದು ಗುರುತಿಸಲಾಗಿದೆ.
ತನ್ನ ಮಗ ಸೆಲ್ವಂ ಮತ್ತು ಸೊಸೆಯೊಂದಿಗೆ ಚೆನ್ನೈನ ಆಯಪಕ್ಕಂನಲ್ಲಿ ವಾಸಿಸುತ್ತಿದ್ದ ಆಕೆ ದೃಷ್ಟಿ ಸಮಸ್ಯೆಯಿಂದ ಮತ್ತು ಮಧುಮೇಹದಿಂದ ಬಳಲುತ್ತಿದ್ದಳು.
ಮೇನಕಾ ಮನೆಯಲ್ಲಿ ಒಬ್ಬಂಟಿಯಾಗಿದ್ದರೆ, ಮಗ ಮತ್ತು ಸೊಸೆ ಶನಿವಾರ ಕೆಲಸಕ್ಕೆ ಹೋಗಿದ್ದರು. ಬೆಳಿಗ್ಗೆ 11 ರ ಸುಮಾರಿಗೆ ತನ್ನ ಮಧುಮೇಹಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳಲು ನೀರು ಹುಡುಕುತ್ತಿರುವಾಗ, ರೆಫ್ರಿಜರೇಟರ್ನ ಮೇಲ್ಭಾಗದಲ್ಲಿ ಬಾಟಲಿಯನ್ನು ಇಟ್ಟಿರುವುದನ್ನು ನೋಡಿದ ಆಕೆ ನೀರು ಎಂದು ಭಾವಿಸಿ ಕುಡುದಿದ್ದಾಳೆ, ಆದರೆ ಅದು ಸ್ವಚ್ಚಗೊಳಿಸುವ ಆ್ಯಸಿಡ್ ಆಗಿತ್ತು.
ಆ್ಯಸಿಡ್ ಕುಡಿತ ತಕ್ಷಣ ಬಾಯಿ ಮತ್ತು ಗಂಟಲು ಸುಟ್ಟದ್ದರಿಂದಾಗಿ ನೋವಿನಿಂದ ಕಿರುಚಿದ್ದು, ನೆರೆಹೊರೆಯವರು ಅವಳ ಮನೆಗೆ ನುಗ್ಗಿ ಚಿಕಿತ್ಸೆಗಾಗಿ ಹತ್ತಿರದ ಖಾಸಗಿ ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ದರು. ನಂತರ ಅವರನ್ನು ಸರ್ಕಾರಿ ಕಿಲ್ಪಾಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಅಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಮಹಿಳೆ ದೃಷ್ಟಿ ಕಡಿಮೆ ಇರುವುದರಿಂದ ನೀರು ಎಂದು ಭಾವಿಸಿ ಆ್ಯಸಿಡ್ ಅನ್ನು ಕುಡಿದಿದ್ದಾರೆ. ಆ್ಯಸಿಡ್ ಕುಡಿದಿರುವುದರಿಂದ ಅವರ ಬಾಯಿಯಲ್ಲಿ ತೀವ್ರವಾದ ಸುಟ್ಟ ಗಾಯಗಳಾಗಿರುವುದರಿಂದ ಆಕೆಯ ಹೇಳಿಕೆಯನ್ನು ದಾಖಲಿಸಲಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.