ನವದೆಹಲಿ ,ಏ 12 (DaijiworldNews/MS): ಎಲ್ಲರಿಗೂ ಕರೋನಾ ಲಸಿಕೆ ಲಭ್ಯವಾಗುವಂತೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಮತ್ತೆ ಇದಕ್ಕಾಗಿ ದ್ವನಿಯೆತ್ತಿದ್ದು " ದೇಶದ ಎಲ್ಲಾ ನಾಗರೀಕರಿಗೂ ಸುರಕ್ಷಿತ ಜೀವನದ ಹಕ್ಕು ಇರುವುದರಿಂದ ಲಸಿಕೆಯೂ ಅತ್ಯಾವಶ್ಯಕತೆಯಾಗಿದೆ ಎಂದು ಹೇಳಿದ್ದಾರೆ.
ಎಲ್ಲಾ ನಾಗರಿಕರಿಗೆ ವೈರಸ್ನಿಂದ ರಕ್ಷಿಸಿಕೊಳ್ಳಲು COVID-19 ಲಸಿಕೆ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷವೂ ಸಾಮಾಜಿಕ ಮಾಧ್ಯಮದಲ್ಲಿ " ಸ್ಪೀಕ್ ಅಪ್ ಫೋರ್ ವಾಕೈನ್ಸ್ ಫೋರ್ ಅಲ್" ಎನ್ನುವ ಅಭಿಯಾನ ಆರಂಭಿಸಿದ್ದು ಎಲ್ಲರು ಲಸಿಕೆಗಾಗಿ ದ್ವನಿ ಎತ್ತಬೇಕು ಎಂದು ಹೇಳಿದ್ದಾರೆ.
ಈ ಬಗೆ ಟ್ವೀಟ್ ಮಾಡಿರುವ ಅವರು, " ಕರೋನಾ ಲಸಿಕೆ ದೇಶದ ಅಗತ್ಯವಾಗಿದೆ. ನೀವೆಲ್ಲರೂ ಅದಕ್ಕಾಗಿ ಧ್ವನಿ ಎತ್ತಬೇಕು. ಪ್ರತಿಯೊಬ್ಬರಿಗೂ ಸುರಕ್ಷಿತ ಜೀವನಕ್ಕೆ ಹಕ್ಕಿದೆ’ ಎಂದು ಬರೆದುಕೊಂಡಿದ್ದಾರೆ. ಮಾತ್ರವಲ್ಲದೆ ಎಲ್ಲಾ ನಾಗರಿಕರಿಗೆ ಲಸಿಕೆ ಲಭ್ಯವಾಗುವಂತೆ ಮಾಡುವ ಕಿರು ವೀಡಿಯೊವನ್ನೂ ಅವರು ಹಂಚಿಕೊಂಡಿದ್ದಾರೆ.
ಭಾರತದಲ್ಲಿ ಸೋಮವಾರ ಬೆಳಿಗ್ಗೆ ಗರಿಷ್ಠ 1,68,912 ಕೊವೀಡ್ ಸೋಂಕು ಪ್ರಕರಣ ಮತ್ತು 904 ಸಾವು ಸಂಭವಿಸಿದ್ದು, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,35,27,717ಕ್ಕೂ ಹೆಚ್ಚಿವೆ.