ಹುಣಸೂರು, ಏ.12 (DaijiworldNews/HR): ಸಾರಿಗೆ ನೌಕರರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ನೌಕರರ ಆಕ್ರೋಶಕ್ಕೆ ಐದು ಬಸ್ಗಳ ಗಾಜು ಪುಡಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಹುಣಸೂರಿನ ಮಾರ್ಗ ಮಧ್ಯೆ ರಂಗಯ್ಯನ ಕೊಪ್ಪಲು ಗೇಟ್ ಬಳಿ ಮೈಸೂರು ಕಡೆಗೆ ತೆರಳುತ್ತಿದ್ದ ಬಸ್ಗೆ ಕಲ್ಲು ಹೋಡೆದಿದ್ದು, ಬಸ್ನ ಹಿಂಬದಿಯ ಗಾಜು ಒಡೆದಿರುವ ಕಾರಣ ಬಸ್ನಲ್ಲಿದ್ದ ಗೋಪಾಲಸ್ವಾಮಿ ಎಂಬ ಪ್ರಯಾಣಿಕರ ತಲೆಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಬಸ್ಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪೊಲೀಸರನ್ನು ಕಂಡ ಆರೋಪಿಗಳಾದ ಹುಣಸೂರು ಡಿಪೋದ ಮೆಕ್ಯಾನಿಕ್ ಗಳಾದ ಸಂತೋಷ್ ಭಜಂತ್ರಿ ಹಾಗೂ ಕೃಷ್ಣ ಮೂರ್ತಿ ಪೊಲೀಸರನ್ನು ಕಂಡು ಪರಾರಿಯಾಗಿದ್ದು, ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಬಿಳಿಕೆರೆ ಹಾಗೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.