ವಿಜಯಪುರ, ಏ.11 (DaijiworldNews/HR): "ಬಿ.ವೈ.ವಿಜಯೇಂದ್ರ ಬಳಿ ಹಣವಿದೆ ಆದರೆ ನಾಯಕತ್ವದ ಗುಣಗಳಿಲ್ಲ. ಕರ್ನಾಟಕದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದ್ದು, ಶೀಘ್ರದಲ್ಲಿ ಅವರ ಫೆಡರಲ್ ಬ್ಯಾಂಕ್ ಹಗರಣ ಹೊರಬರಲಿದೆ" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೇ ಎರಡರೊಳಗೆ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದು, ಯತ್ನಾಳ್ ಸಿಎಂ ಆಗ್ತಾರೋ ಅಥವಾ ಬೇರೆಯವರು ಆಗ್ತಾರೋ ಗೊತ್ತಿಲ್ಲ. ಆದರೆ ಬದಲಾವಣೆಯಾಗುವುದು ಮಾತ್ರ ಖಚಿತ" ಎಂದರು.
ಇನ್ನು ಸಾರಿಗೆ ನೌಕರರನ್ನು ಕೊಡಿಹಳ್ಳಿ ಚಂದ್ರಶೇಖರ್ ತಪ್ಪು ದಾರಿಗೆ ಎಳೆಯುತ್ತಿದ್ದು, ಮುಷ್ಕರದಿಂದ ಜನರಿಗೆ ತೊಂದರೆಯಾಗುತ್ತಿದೆ. ಕೋಡಿಹಳ್ಳಿಗೆ ಇದು ಸಂಬಂಧ ಇಲ್ಲದ ವಿಚಾರ. ಹೊರಗಿನವರನ್ನು ತಂದು ಅಧ್ಯಕ್ಷರನ್ನಾಗಿ ಮಾಡಿರುವುದೇ ಸರಿಯಿಲ್ಲ" ಎಂದಿದ್ದಾರೆ.