ನವದೆಹಲಿ, ಎ.11 (DaijiworldNews/PY): "ಪಶ್ಚಿಮ ಬಂಗಾಳ ವಿಧಾನಭೆಯ ನಾಲ್ಕನೇ ಹಂತದ ಮತದಾನದ ಸಂದರ್ಭ ಕೂಚ್ ಬೆಹಾರ್ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದು, ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
"ಮಮತಾ ಬ್ಯಾನರ್ಜಿ ಅವರು ಕೇಂದ್ರ ಪಡೆಗಳ ವಿರುದ್ದ ಕೂಚ್ ಬೆಹಾರ್ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದರು" ಎಂದು ತಿಳಿಸಿದ್ದಾರೆ.
"ಎ.10ರಂದು ಕೂಚ್ಬೆಹಾರ್ನಲ್ಲಿ ಮತದಾನ ನಡೆದ ಸಂದರ್ಭ ಹಿಂಸಾಚಾರವಾಗಿತ್ತು. ಮತಗಟ್ಟೆಯ ಸಮೀಪ ಕೇಂದ್ರ ಪಡೆಗಳು ಎರಡು ಬಾರಿ ಗುಂಡು ಹಾರಿಸಿದ್ದರು. ಈ ಸಂದರ್ಭ ಜನರು ಮತ ಚಲಾವಣೆ ಮಾಡುತ್ತಿದ್ದರು. ಗುಂಡು ಹಾರಿಸಿದ ಪರಿಣಾಮ ನಾಲ್ವರು ಕಾರ್ಯಕರ್ತರು ಮೃತಪಟ್ಟಿದ್ದಾರೆ" ಎಂದು ಟಿಎಂಸಿ ಆರೋಪಿಸಿದೆ.
"ಆತ್ಮರಕ್ಷಣೆ ಸಲುವಾಗಿ ಚುನಾವಣಾ ಆಯೋಗ ಕೇಂದ್ರ ಪಡೆಗಳು ಗುಂಡು ಹಾರಿಸಿವೆ" ಎಂದು ಆಯೋಗ ಕೇಂದ್ರ ಪಡೆಗಳಿಗೆ ಕ್ಲೀನ್ ಚೀಟ್ ನೀಡಿತ್ತು.