ನವದೆಹಲಿ, ಎ.11 (DaijiworldNews/PY): ಐದರ ಬಾಲಕಿ ಕೇವಲ ಎರಡು ಗಂಟೆಗಳಲ್ಲಿ 36 ಪುಸ್ತಕಗಳನ್ನು ಓದಿ ಗಿನ್ನೆಸ್ ರೆಕಾರ್ಡ್ಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾರೆ.
ಚೆನ್ನೈ ಮೂಲದ ಅಮೇರಿಕಾದ ಕಿಯಾರಾ ಕೌರ್ ಈ ಸಾಧನೆ ಮಾಡಿದ ಬಾಲಕಿ.
ಕಿಯಾರ್ ಕೌರ್ ಬರೋಬ್ಬರಿ 36 ಪುಸ್ತಕಗಳನ್ನು ಓದುವ ಮೂಲಕ ಏಷಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ಪಡೆದಿದ್ದಾಳೆ. ಈಕೆ 105 ನಿಮಿಷಗಳಲ್ಲಿ 36 ಪುಸ್ತಕಗಳನ್ನು ಓದಿದ್ದಾಳೆ.
ಈಕೆಗೆ ಓದುವುದೆಂದರೆ ತುಂಬಾ ಇಷ್ಟವಂತೆ. ಬಾಲಕಿಯ ಓದುವ ಹವ್ಯಾಸವನ್ನು ಆಕೆಯ ಶಾಲಾ ಶಿಕ್ಷಕರು ಗುರುತಿಸಿದ್ದು, ಅಬು ದುಬೈ ಶಾಲೆಯಲ್ಲಿ ಓದುತ್ತಿದ್ದ ಕಿಯಾರ್ ಕೌರ್ ಹವ್ಯಾಸದ ಬಗ್ಗೆ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಿಯಾರ್ ಕೌರ್ನ ಪೋಷಕರು ಹೇಳುವ ಹಾಗೆ ಆಕೆ ಕಳೆದ ವರ್ಷ ಸುಮಾರು 200 ಪುಸ್ತಕಗಳನ್ನು ಓದಿದ್ದಾಳಂತೆ. ಅಲ್ಲದೇ, ಆಕೆ ಹಲವು ಪುಸ್ತಕಗಳನ್ನು ಓದಿದ್ದಾಳಂತೆ. ಈಕೆಗೆ ಹಳೆಯ ಪುಸ್ತಕಗಳನ್ನು ಓದುವುದು ಎಂದರೆ ತುಂಬಾ ಇಷ್ಟವಂತೆ.
ಭಾರತ ಮೂಲದ ಈ ಅಮೇರಿಕಾ ಬಾಲಕಿಗೆ ಓದುವ ಹವ್ಯಾಸ ಆಕೆಯ ತಾತನಿಂದ ಬಂದಿದೆ. ಕಿಯಾರ್ ಕೌರ್ ತನ್ನ ತಾತನ ಜೊತೆ ಫೋನ್ನಲ್ಲಿ ಮಾತನಾಡುತ್ತಾ ಪುಸ್ತಕಗಳನ್ನು ಓದುತ್ತಿದ್ದು, ಬಾಲಕಿ ಓದುವ ಶೈಲಿ ಹಾಗೂ ಆಕೆ ಕಥೆ ಹೇಳುವ ರೀತಿ ಆಕೆಯ ತಾತನಿಗೆ ಬಲು ಇಷ್ಟವಂತೆ.
ಕಿಯಾರ್ ಕೌರ್ಗೆ ಪುಸ್ತಕಗಳನ್ನು ಓದಲು ಹೇಗೆ ಆಸಕ್ತಿ ಬಂತು ಎನ್ನುವುದನ್ನು ಆಕೆ ಹೇಳಿದ್ದಾಳೆ. ಪುಸ್ತಲಗಳಲ್ಲಿರುವ ಬಣ್ಣ ಬಣ್ಣದ ಚಿತ್ರಗಳನ್ನು ನೋಡಿ ಹಾಗೂ ಅಕ್ಷರಗಳನ್ನು ಹೇಗೆ ಬರೆದರು ಎನ್ನುವುದನ್ನು ನೋಡಿ ಆಕೆಗೆ ಓದುವ ಹವ್ಯಾಸವಾಗಿದೆಯಂತೆ. ಸಿಂಡ್ರೆಲ್ಲಾ, ಅಲಿಕ್ ಅವರ ವಂಡರ್ಲ್ಯಾಂಡ್, ಶೂಟಿಂಗ್ ಸ್ಟಾರ್ ಹಾಗೂ ಲಿಟ್ಟಲ್ ರೆಡ್ ರೈಡಿಂಗ್ ಹೋಡ್ ಕಿಯಾರ್ ಕೌರ್ನ ಇಷ್ಟವಾದ ಪುಸ್ತಕಗಳು.