ಬೀದರ್, ಎ.11 (DaijiworldNews/PY): "ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೊದಲು ಕೀಳುಮಟ್ಟದ ರಾಜಕೀಯವನ್ನು ಬಿಡಬೇಕು. ಕೇವಲ ಟೀಕೆಗಳಿಂದ ಮಾತ್ರವೇ ಬದಲಾವಣೆ ಮಾಡುತ್ತೇವೆ ಎನ್ನುವ ಚಟ ಅವರಿಗಿದೆ" ಎಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ.
ರವಿವಾರ ಬಸವಕಲ್ಯಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮೊದಲು ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜೊತೆಗಿನ ಭಿನ್ನಾಭಿಪ್ರಾಯವನ್ನು ಸರಿ ಮಾಡಿಕೊಳ್ಳಲಿ. ಬೇರೆಯವರ ಟೀಕೆ ಮಾಡುವ ಮುನ್ನ ನಿಮ್ಮ ತಟ್ಟೆಯಲ್ಲಿ ಬಿದ್ದ ಹೆಗ್ಗಣವನ್ನು ನೋಡಿ ಬಳಿಕ ಮಾತನಾಡಬೇಕು" ಎಂದಿದ್ದಾರೆ.
"ಕಾಂಗ್ರೆಸ್ ಐಸಿಯುನಲ್ಲಿ ಕೊನೆಯ ಉಸಿರಿನಲ್ಲಿದೆ. ಬಿಜೆಪಿ ವಿರುದ್ದ ಟೀಕೆ ಮಾಡುವುದು ಸರಿಯಲ್ಲ. ಬಿಜೆಪಿಗೆ ಉತ್ತಮ ನಾಯಕತ್ವ ಇದೆ" ಎಂದು ತಿಳಿಸಿದ್ದಾರೆ.
"ಪಕ್ಷವು ಬಸವಕಲ್ಯಾಣ ಸೇರಿದಂತೆ ರಾಜ್ಯದ ಮೂರು ಉಪ ಚುನಾವಣೆಗಳಲ್ಲಿ ಗೆಲುವು ಸಾಧಿಸಲಿದೆ. ಕ್ಷೇತ್ರದ ಮತದಾರರು ಆಶೀರ್ವಾದ ಮಾಡಬೇಕು" ಎಂದು ಹೇಳಿದ್ದಾರೆ.