ಲಕ್ನೋ, ಎ.11 (DaijiworldNews/PY): 2018ರ ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸೆಂಗರ್ ಪತ್ನಿಯ ಚುನಾವಣಾ ಉಮೇದುವಾರಿಕೆಯನ್ನು ಬಿಜೆಪಿ ರದ್ದುಗೊಳಿಸಿದೆ.
ಜಿಲ್ಲಾ ಪಂಚಾಯತ್ ಚುನಾವಣೆ ಸಂಬಂಧ ಎಪ್ರಿಲ್ 9ರಂದು ಬಿಜೆಪಿ ಬಿಡುಗಡೆ ಮಾಡಿದ್ದ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೆಂಗರ್ ಪತ್ನಿ, ಸಂಗೀತಾ ಸೆಂಗರ್ ಹೆಸರು ಇತ್ತು.
"ಸಂಗೀತಾ ಸೆಂಗರ್ ಅವರ ಚುನಾವಣಾ ಉಮೇದುವಾರಿಕೆಯನ್ನು ರದ್ದು ಮಾಡಲಾಗಿದೆ" ಎಂದು ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ಟ್ವೀಟ್ ಮಾಡಿದೆ.