ಕೊಚ್ಚಿ, ಏ.11 (DaijiworldNews/HR): ಅನಿವಾಸಿ ಭಾರತೀಯ ಲೂಲು ಗ್ರೂಪ್ ಅಧ್ಯಕ್ಷ ಯೂಸುಫ್ ಆಲಿ ಸೇರಿದಂತೆ ಒಟ್ಟು 7 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ವೊಂದು ಭಾನುವಾರ ಬೆಳಿಗ್ಗೆ ಬೆಳಿಗ್ಗೆ 9 ಗಂಟೆ ಕೇರಳದ ಕೊಚ್ಚಿಯಲ್ಲಿ ಪತನಗೊಂಡಿದೆ.
ಲೂಲು ಗ್ರೂಪ್ನ ಸ್ಥಾಪಕ ಯೂಸುಫ್ ಆಲಿ, ಅವರ ಪತ್ನಿ ಮತ್ತು ಮೂವರು ಸಿಬ್ಬಂದಿ ಹಾಗೂ ಗಗನಸಖಿಯರಿಬ್ಬರು ಲೂಲು ಗ್ರೂಪ್ನ ಹೆಲಿಕಾಪ್ಟರ್ನಲ್ಲಿ ಪ್ರಯಣಿಸುತ್ತಿದ್ದರು.
ಬೆಳಿಗ್ಗೆ ಸ್ವಲ್ಪ ಮಳೆಯ ಮಧ್ಯೆ ಈ ಘಟನೆ ಸಂಭವಿಸಿದ್ದು, ಪನಂಗಾಡ್ ಎಂಬಲ್ಲಿರುವ ಕೇರಳ ಮೀನುಗಾರಿಕೆ ಹಾಗೂ ಸಮುದ್ರ ಅಧ್ಯಯನ ವಿಶ್ವವಿದ್ಯಾಲಯದ ಆವರಣದಲ್ಲಿದ್ದ ಔಗು ಪ್ರದೇಶದಲ್ಲಿ ಹೆಲಿಕಾಪ್ಟರ್ ಕುಸಿದು ಬಿದ್ದಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸ್ಥಳೀಯರು ಸಹಕರಿಸಿದ್ದಾರೆ.
ಅವಘಡದಲ್ಲಿ ಗಾಯಗೊಂಡವರಾನ್ನು ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರು ಸುರಕ್ಷಿತರಾಗಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ’ ಎಂದು ಲೇಕ್ಶೋರ್ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದರು.