ಕೋಲ್ಕತ್ತ, ಎ.11 (DaijiworldNews/PY): ಚುನಾವಣಾ ಆಯೋಗದ ವಿರುದ್ದ ಕಿಡಿಕಾರಿರುವ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ, "ಎಂಸಿಸಿಯನ್ನು ಮೋದಿ ನೀತಿ ಸಂಹಿತೆ ಎಂದು ಮರುನಾಮಕರಣೆ ಮಾಡಿ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಚುನಾವಣಾ ಆಯೋಗವನ್ನು ಎಂಸಿಸಿ ಅನ್ನು ಮೋದಿ ನೀತಿ ಸಂಹಿತೆ ಎಂದು ಮರುನಾಮಕರಣ ಮಾಡಬೇಕು. ಬಿಜೆಪಿ ತನ್ನ ಎಲ್ಲಾ ಶಕ್ತಿಯನ್ನು ಬಳಸಿಕೊಳ್ಳಬಹುದು. ಆದರೆ, ಜಗತ್ತಿನಲ್ಲಿ ಯಾವುದೇ ಶಕ್ತಿಗೂ ಕೂಡಾ ನನ್ನನ್ನು ತಡೆಯಲು ಸಾಧ್ಯವಿಲ್ಲ" ಎಂದಿದ್ದಾರೆ.
"ಕೂಚ್ಬೆಹರ್ನಲ್ಲಿ ನನ್ನ ಅವರು ನನ್ನ ಸಹೋದರ, ಸಹೋದರಿಯರನ್ನು ಮೂರು ದಿನಗಳ ಕಾಲ ಭೇಟಿ ಮಾಡದಂತೆ ನಿರ್ಬಂಧಿಸಬಹುದು. ಆದರೆ, ನಾನು ನಾಲ್ಕನೇ ದಿನ ಅಲ್ಲಿರುತ್ತೇನೆ" ಎಂದಿದ್ದಾರೆ.
ಕೂಚ್ ಬೆಹರ್ನಲ್ಲಿ ರವಿವಾರ ಪ್ರತಿಭಟನಾ ರ್ಯಾಲಿ ನಡೆಸುವುದಾಗಿ ಹಾಗೂ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡುವುದಾಗಿ ದೀದಿ ಘೋಷಣೆ ಮಾಡಿದ್ದರು. ಆದರೆ, ಮುಂದಿನ 72 ಗಂಟೆಗಳವರೆಗೆ ಕೂಚ್ಬೆಹರ್ ಜಿಲ್ಲೆಗೆ ಯಾವುದೇ ಪಕ್ಷಕ್ಕೆ ಸೇರಿದ ರಾಜಕಾರಣಿಗಳು ಭೇಟಿ ನೀಡಬಾರದು ಎಂದು ಶನಿವಾರ ಚುನಾವಣಾ ಆಯೋಗ ನಿರ್ದೇಶಿಸಿತ್ತು. ಪಶ್ಚಿಮ ಬಂಗಾಳದಲ್ಲಿ ಶನಿವಾರ ನಾಲ್ಕನೇ ಹಂತದ ಮತದಾನ ನಡೆದಿತ್ತು. ಈ ಸಂದರ್ಭ ಜಿಲ್ಲೆಯ ಸೀತಾಲಕುಚ್ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ನಡೆದ ಗಲಭೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರು.