ಚೆನ್ನೈ, ಏ.11 (DaijiworldNews/HR): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕರೊನಾ ಕೊರೊನಾ ಬಲಿಯಾಗಿದ್ದಾರೆ. ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು.
ಮೃತಪಟ್ಟವರನ್ನು ಪಿಎಸ್ಡಬ್ಲ್ಯು ಮಾಧವ ರಾವ್ ಎಂದು ಗುರುತಿಸಲಾಗಿದೆ.
ಮಾರ್ಚ್ ನಲ್ಲಿ ಕರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಮಾಧವ್ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ವಿರುಧನಗರ ಜಿಲ್ಲೆಯ ಶ್ರಿ ವಿಲ್ಲಿಪುಥೂರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು ಒಂದು ವೇಳೆ ಮಾಧವ ರಾವ್ ಗೆದ್ದರೆ ಮರು ಚುನಾವಣೆ ನಡೆಯಲಿದೆ.
ಇನ್ನು ಮಾಧವ ರಾವ್ ಸಾವಿನ ಬಗ್ಗೆ ಟ್ವೀಟ್ ಮಾಡಿರುವ ತಮಿಳುನಾಡು ಮತ್ತು ಪುದುಚೇರಿ ಎಐಸಿಸಿ ಕಾರ್ಯದರ್ಶಿ, ತಮಿಳುನಾಡಿದ ಕಾಂಗ್ರೆಸ್ ನಾಯಕ ಮತ್ತು ಶ್ರಿವಿಲ್ಲಿಪುಥೂರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಧವ್ ರಾವ್ ಕರೊನಾದಿಂದ ನಿಧನರಾಗಿದ್ದು, ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ" ಎಂದು ಬರೆದುಕೊಂಡಿದ್ದಾರೆ.