ಬೆಂಗಳೂರು, ಎ.11 (DaijiworldNews/PY): "ಕೆಲ ಕಾಂಗ್ರೆಸ್ ನಾಯಕರು ಪರಿಜ್ಞಾನವಿಲ್ಲದೇ ಪ್ರಧಾನಿ ಮೋದಿ ಅವರನ್ನು ದೂಷಿಸಿ ಪ್ರಚಾರಗಿಟಿಸಿಕೊಳ್ಳಲು ಮುಂದಾಗಿದ್ದಾರೆ" ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.
"ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮೊದಲಾದ ಕಾಂಗ್ರೆಸ್ ನಾಯಕರ ಕುತಂತ್ರ ಹಾಗೂ ಸತ್ಯಕ್ಕೆ ದೂರವಾದ ಟೀಕೆಗಳನ್ನು ಪ್ರಜ್ಞಾವಂತ ಕನ್ನಡಿಗರು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬ ಖಚಿತ ನಂಬಿಕೆ ನನಗಿದೆ" ಎಂದು ಹೇಳಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಮೇಲ್ಜಾತಿ, ಮೇಲ್ವರ್ಗ, ಉದ್ದಿಮೆ ಅಥವಾ ವಂಶಪಾರಂಪರ್ಯ ಹಿನ್ನೆಲೆಯಂದ ಮೇಲೆ ಬಂದಿಲ್ಲ ಎನ್ನುವ ವಿಚಾರ ದೇಶದ ಜನತೆಗೆ ಹಾಗೂ ಕನ್ನಡಿಗರಿಗೆ ತಿಳಿದಿದೆ. ವಂಶಪಾರಂಪರ್ಯಕ್ಕೆ ದಾಸರಾದ ಕೈನಾಯಕರು ಪ್ರದಾನಿ ಮೋದಿ ಅವರ ದಕ್ಷತೆ, ಕಾರ್ಯಶೈಲಿಯ ಬಗ್ಗೆ ತಿಳಿದುಕೊಳ್ಳಲೇ ಇಲ್ಲ" ಎಂದು ಟೀಕೆ ಮಾಡಿದ್ದಾರೆ.
"ನರೇಂದ್ರ ಮೋದಿ ಅವರು ಗುಜರಾತ್ನ ಸಿಎಂ ಆದ ಬಳಿಕ ಪ್ರಧಾನಮಂತ್ರಿಯಾಗಿ ದೇಶದ ಅಭಿವೃದ್ದಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಜನನಾಯಕ. ಪ್ರಧಾನಿ ಮೋದಿ ಅವರ ಬಗ್ಗೆ ಭಾರತೀಯ ಜನತಾ ಪಕ್ಷ ಮಾತ್ರವಲ್ಲದೇ, ದೇಶದ ಎಲ್ಲಾ ರಾಜಕೀಯ ಪಕ್ಷಗಳು ಹೆಮ್ಮೆಪಡುತ್ತಿವೆ" ಎಂದಿದ್ದಾರೆ.
"ಪ್ರಧಾನಿ ಮೋದಿ ಅವರನ್ನು ಸರ್ವಾಧಿಕಾರಿ ಬಿಜೆಪಿ ಪಕ್ಷದ ಫಾಸಿಸ್ಟ್ ಎಂದು ಟೀಕಿಸುವ ಒಂದು ವರ್ಗದ ಬುದ್ದಿಜೀವಿಗಳು ಕಾಂಗ್ರೆಸ್ ಪಕ್ಷದ ರಾಜಕೀಯ ಸಂಸ್ಕೃತಿಯನ್ನ ಏಕೆ ಪ್ರಶ್ನಿಸುತ್ತಿಲ್ಲ?" ಎಂದು ಕೇಳಿದ್ದಾರೆ.