ಬೆಂಗಳೂರು, ಎ.11 (DaijiworldNews/PY): "ಎಪ್ರಿಲ್ 11ರಿಂದ ಎಪ್ರಿಲ್ 14ರವರೆಗೆ ನಾಲ್ಕು ದಿನ ಕೊರೊನಾ ಲಸಿಕೆ ಉತ್ಸವವನ್ನು ಆಚರಿಸಲಾಗುತ್ತಿದ್ದು, 45 ವರ್ಷದ ಮೇಲಿನ ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿ" ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿಸಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಏಪ್ರಿಲ್ 11 ರಿಂದ ಏಪ್ರಿಲ್ 14 ರವರೆಗೆ ಕರೋನಾ ಲಸಿಕಾ ಉತ್ಸವವನ್ನು ಆಚರಿಸುತ್ತಿದ್ದೇವೆ. 45 ವರ್ಷದ ಮೇಲಿನ ಎಲ್ಲರೂ ತಪ್ಪದೆ ಇಂದೆ ಕರೋನ ಲಸಿಕೆ ಹಾಕಿಸಿ. ಬನ್ನಿ, ಕರೋನಾ ಯುಗಕ್ಕೆ ಅಂತ್ಯ ಹಾಡೋಣ" ಎಂದಿದ್ದಾರೆ.
"ಹೊರ ಹೋಗದಂತೆ ಮನೆಯೋಳಗೆ ಕೂಊಡಿ ಹಾಕಿದ ಕೊರೊನಾ ಕಹಿ ನೆನಪನ್ನು ಮರೆಯಿರಿ, ಮನೆ ಮಂದಿಗೆಲ್ಲಾ ಲಸಿಕೆಯ ಸಿಹಿ ಕೊಡಿಸಿರಿ" ಎಂದು ಮನವಿ ಮಾಡಿದ್ದಾರೆ.