ಜಮ್ಮು-ಕಾಶ್ಮೀರ, ಎ.11 (DaijiworldNews/PY): ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಮತ್ತೆ ಎನ್ಕೌಂಟರ್ ನಡೆದಿದ್ದು, ಭದ್ರತಾ ಹಾಗೂ ಉಗ್ರ ನಡುವೆ ನಡೆದ ಎನ್ಕೌಂಟರ್ನಲ್ಲಿ ಮೂವರು ಅಪರಿಚಿತ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
"ಶೋಪಿಯಾನ್ ಜಿಲ್ಲೆಯ ಹಡಿಪೊರದಲ್ಲಿ ಇನ್ನೂ ಕೂಡಾ ಎನ್ಕೌಂಟರ್ ನಡೆಯುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ" ಎಂದು ಕಾಶ್ಮೀರ ವಲಯ ಪೊಲೀಸರು ಹೇಳಿದ್ದಾರೆ.
ಎನ್ಕೌಂಟರ್ ನಡೆಯುವ ಪ್ರಾರಂಭದಲ್ಲಿ, ಉಗ್ರಗಾಮಿ ಸಂಘಟನೆಗೆ ನೂತವಾಗಿ ಸೇರ್ಪಡೆಗೊಂಡಿದ್ದ ಯುವಕರನ್ನು ಶರಣಾಗುವಂತೆ ಪೊಲೀಸರು ಕೇಳಿಕೊಂಡಿದ್ದರು. ಅಲ್ಲದೇ, ಓರ್ವ ಉಗ್ರನ ಪೋಷಕರು ಕೂಡಾ ಶರಣಾಗುವಂತೆ ಕೋರಿದ್ದರು. ಆದರೆ, ಆತ ಯಾರ ಮಾತನ್ನೂ ಕೇಳಲಿಲ್ಲ. ಆತನನ್ನು ಇತರ ಉಗ್ರರು ಶರಣಾಗಲು ಬಿಡಲಿಲ್ಲ. ಈ ಕಾರಣದಿಂದ ಪೊಲೀಸರು ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.