ಹುಬ್ಬಳ್ಳಿ, ಏ.10 (DaijiworldNews/MB) : ಪೆಟ್ರೋಲ್ ಬಂಕ್ನಲ್ಲಿಯೇ ವ್ಯಾನ್ಗೆ ಬೆಂಕಿ ಹೊತ್ತಿಕೊಂಡ ಘಟನೆ ಇಲ್ಲಿಯ ಹಳೇಹುಬ್ಬಳ್ಳಿ ಇಂಡಿ ಪಂಪ್ನಲ್ಲಿ ನಡೆದಿದ್ದು, ಇಲ್ಲಿ ಕೆಲ ಹೊತ್ತು ಭಯಭೀತ ವಾತಾವರಣ ಸೃಷ್ಟಿಯಾಗಿತ್ತು. ಸಿಬ್ಬಂದಿಗಳ ಜಾಗರೂಕತೆಯಿಂದ ಭಾರೀ ಅನಾಹುತ ತಪ್ಪಿದೆ.
ಶನಿವಾರ ಸಂಜೆ ವ್ಯಾನ್ ಚಾಲಕ ಪೆಟ್ರೋಲ್ ಹಾಕಿಸಿಕೊಳ್ಳಲು ಹಳೇಹುಬ್ಬಳ್ಳಿಯ ಇಂಡಿ ಪಂಪ್ಗೆ ಹೋಗಿದ್ದು ಈ ಸಂದರ್ಭ ಶಾರ್ಟ್ ಸರ್ಕ್ಯೂಟ್ನಿಂದ ವ್ಯಾನ್ಗೆ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿ ಕೂಡಲೇ ವಾಹನ ಚಾಲಕ ಮತ್ತು ವ್ಯಾನ್ನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಹೊರಬಂದಿದ್ದು ಪ್ರಾಣ ಉಳಿಸಿಕೊಂಡಿದ್ದಾರೆ.
ಇನ್ನು ಸಿಬ್ಬಂದಿಗಳ ಜಾಗರೂಕತೆಯಿಂದಾಗಿ ಭಾರೀ ಅನಾಹುತ ತಪ್ಪಿದೆ. ಒಂದು ವೇಳೆ ಪೆಟ್ರೋಲ್ ಬಂಕ್ಗೆ ಬೆಂಕಿ ಆವರಿಸಿದ್ದರೆ, ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಬೆಂಕಿ ಹೊತ್ತಿಕೊಂಡಾಗಲೇ ತಕ್ಷಣವೇ ಎಚ್ಚೆತ್ತ ಪೆಟ್ರೋಲ್ ಬಂಕ್ನ ಸಿಬ್ಬಂದಿ ಪೈಯರ್ ಫೈಟರ್ ಮೂಲಕ ಬೆಂಕಿ ನಂದಿಸಲು ಯತ್ನಿಸಿದ್ದು ಈ ಕಾರಣದಿಂದಾಗಿ ಬೆಂಕಿ ಸ್ಪಲ್ಪ ಪ್ರಮಾಣದಲ್ಲಿ ಹತೋಟಿಗೆ ಬಂದಿದೆ. ವ್ಯಾನ್ಅನ್ನು ಪೆಟ್ರೋಲ್ ಬಂಕ್ನಿಂದ ಹೊರತರುವ ಯತ್ನವೂ ಮಾಡಿದ್ದಾರೆ.
ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಈ ವೇಳೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಯೂ ಜೊತೆಯಾಗಿದ್ದಾರೆ.
ಇನ್ನು ಪೆಟ್ರೋಲ್ ಬಂಕ್ನಲ್ಲಿಯೇ ವ್ಯಾನ್ಗೆ ಬೆಂಕಿ ಹತ್ತಿಕೊಂಡಿರುವ ಕಾರಣ ಭಾರೀ ಅನಾಹುತ ಉಂಟಾಗುವ ಸಾಧ್ಯತೆ ಇದ್ದರೂ ಹಲವು ಮಂದಿ ತಮ್ಮ ಮೊಬೈಲ್ನಲ್ಲಿ ಚಿತ್ರೀಕರಣ ಮಾಡುವುದರಲ್ಲೇ ಮಗ್ನವಾಗಿದ್ದರು. ಬಳಿಕ ಪೊಲೀಸರು ಬಂದು ಹೊರಕಳಿಸಿದ್ದಾರೆ ಎಂದು ಹೇಳಲಾಗಿದೆ.