ಕೋಲ್ಕತ್ತ, ಎ.10 (DaijiworldNews/MB) : ವೀಳ್ಯದ ಎಲೆಯಿಂದ ತೈಲ ತೆಗೆಯುವ ಸಂದರ್ಭ ಉಂಟಾಗುವ ಪೋಲನ್ನು ತಪ್ಪಿಸುವಂತಹ ವೀಳ್ಯದ ಎಲೆಯಿಂದ ತೈಲ ತೆಗೆಯುವ ತಂತ್ರಜ್ಞಾನವನ್ನು ಐಐಟಿ– ಖರಗ್ಪುರ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.
ಶನಿವಾರ ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಪ್ರಸ್ತುತ ಲಭ್ಯವಿರುವ ಉಪಕರಣಗಳಿಗೆ ಹೋಲಿಕೆ ಮಾಡಿದರೆ ಈ ಹೊಸ ತಂತ್ರಜ್ಞಾನವು ಶೇ. 30ರಷ್ಟು ವಿದ್ಯುತ್ ಅನ್ನು ಉಳಿತಾಯ ಮಾಡುತ್ತದೆ. ಹಾಗೆಯೇ ತೈಲ ಪೋಲು ಪ್ರಮಾಣವನ್ನೂ ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಈ ಉಪಕರಣವು ತೈಲ ತೆಗೆಯುವ ಪ್ರಕ್ರಿಯೆಯಲ್ಲಿನ ಕ್ಷಮತೆಯನ್ನು ಅಧಿಕಗೊಳಿಸುತ್ತದೆ. ಶೇ 16ರಷ್ಟು ಹೆಚ್ಚು ತೈಲ ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕೂಡಾ ಮಾಹಿತಿ ನೀಡಿದ್ದಾರೆ.
ಇನ್ನು ಬೆಳೆಗಾರರಿಗೆ ಕೈಗೆಟಕುವ ಬೆಲೆಯಲ್ಲಿ ಈ ಉಪಕರಣವು ದೊರೆಯಲಿದ್ದು 10 ಲೀ.ನಷ್ಟು ವೀಳ್ಯದೆಲೆ ಸಾರ ತೆಗೆಯುವ ಯಂತ್ರಕ್ಕೆ 10 ಸಾವಿರ, 20 ಲೀ. ಸಾಮರ್ಥ್ಯದ ಯಂತ್ರಕ್ಕೆ 20 ಸಾವಿರ ತಗುಲುತ್ತದೆ ಎಂದು ತಿಳಿಸಿದ್ದಾರೆ.