ಹೈದರಾಬಾದ್, ಏ.10 (DaijiworldNews/HR): ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಗನೊಂದಿಗೆ ರಾಜಸ್ಥಾನಕ್ಕೆ ತೆರಳಲೆಂದು ರೈಲು ನಿಲ್ದಾಣಕ್ಕೆ ಬಂದಿದ್ದು, ನೀರು ತರಲು ಹೋದ ಪತ್ನಿ ಮತ್ತೆ ಹಿಂದಿರುಗದೇ ಇದ್ದು, ಪತಿ ಊಹಿಸದಂತಹ ಆಘಾತವೊಂದು ನಡೆದಿದೆ.
ಸಾಂಧರ್ಭಿಕ ಚಿತ್ರ
ರಾಜಸ್ಥಾನದ ಜೋಧ್ಪುರ ಜಿಲ್ಲೆಯ ಬಾರಿ ಖಾಕೊಂಡ ಗ್ರಾಮದ ನಿವಾಸಿ ಪ್ರಭುದಾಸ್ ಎಲ್ ಆಯಂಡ್ ಟಿ ಹೆಸರಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇವರು ರಮ್ಯಾ ಎಂಬಾಕೆಯನ್ನು ಪ್ರೀತಿಸಿ 2018ರಲ್ಲಿ ವಿವಾಹವಾಗಿದ್ದು ಅವರಿಗೆ ಎರಡು ವರ್ಷದ ಒಬ್ಬ ಮಗನಿದ್ದಾನೆ.
ಪ್ರಭುದಾಸ್ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಹೈದರಾಬಾದ್ನಲ್ಲಿರುವ ತನ್ನ ಅಜ್ಜಿ ಮನಗೆ ತೆರಳಿದ್ದು, ಎರಡು ದಿನಗಳವರೆಗೆ ಅಲ್ಲಿಯೇ ಉಳಿದುಕೊಂಡಿದ್ದ. ಬಳಿಕ ರಾಜಸ್ಥಾನಕ್ಕೆ ಹಿಂದಿರುಗಲು ತನ್ನ ಪತ್ನಿ ಮತ್ತು ಮಗನೊಂದಿಗೆ ಸಿಕಂದರಬಾದ್ ರೈಲು ನಿಲ್ದಾಣಕ್ಕೆ ಪ್ರಭುದಾಸ್ ಬಂದಿದ್ದ. ರೈಲಿಗಾಗಿ ಕಾಯುವ ನಡುವೆ ಮಗನೊಂದಿಗೆ ನೀರು ತರಲೆಂದು ಹೊರ ಹೋದ ಪ್ರಭುದಾಸ್ ಪತ್ನಿ ಮರಳಿ ಬರಲೇ ಇಲ್ಲ.
ತುಂಬಾ ಸಮಯದವರೆಗೂ ಕಾದರು ಪತ್ನಿ ಬರದಿದ್ದಾಗ ತಕ್ಷಣ ಗೋಪಾಲಪುರಂ ಪೊಲೀಸ್ ಠಾಣೆಗೆ ತೆರಳಿ ಪ್ರಭುದಾಸ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ರೈಲು ನಿಲ್ದಾಣ ಸಮೀಪದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಪ್ರಭುದಾಸ್ ಪತ್ನಿ ಬೇರೊಬ್ಬನ ಬೈಕ್ನಲ್ಲಿ ಪರಾರಿಯಾಗಿರುವುದು ಗೊತ್ತಾಗಿದೆ.
ಇನ್ನು ಆಕೆ ಹೋಗುವಾಗ 20 ಸಾವಿರ ರೂ. ಹಣ ಮತ್ತು 2 ಪೌಂಡ್ ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿರುವುದಾಗಿ ಪ್ರಭುದಾಸ್ ದೂರಿದ್ದಾರೆ. ಬೈಕ್ ನಂಬರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.