ನವದೆಹಲಿ, ಏ. 09 (DaijiworldNews/HR): ಪೂರ್ವ ಲಡಾಖ್ ಗಡಿಯಿಂದ ಭಾರತ ಮತ್ತು ಚೀನಾ ಸೇನೆಯನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಯನ್ನು ಮುಂದುವರಿಸುವ ಸಂಬಂಧ ಭಾರತ ಮತ್ತು ಚೀನಾ ಸೇನೆಗಳ ಕಮಾಂಡರ್ಗಳ ಮಟ್ಟದ 11ನೇ ಸುತ್ತಿನ ಮಾತುಕತೆ ಶುಕ್ರವಾರ ನಡೆಯಿತು.
ಪೂರ್ವ ಲಡಾಖ್ ಬಳಿಯ ವಾಸ್ತವ ನಿಯಂತ್ರಣ ರೇಖೆ ಸಮೀಪದ ಚುಶುಲ್ ಗಡಿಠಾಣೆಯಲ್ಲಿ 11ನೇ ಸುತ್ತಿನ ಮಾತುಕತೆ ಆರಂಭವಾಗಿದ್ದು, ಭಾರತದ ನಿಯೋಗದ ನೇತೃತ್ವವನ್ನು ಲೆಫ್ಟಿನೆಂಟ್ ಜನರಲ್ ಪಿ.ಜಿ.ಕೆ.ಮೆನನ್ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಡೆಪ್ಸ್ಯಾಂಗ್, ಗೋಗ್ರಾ ಮತ್ತು ಹಾಟ್ಸ್ಟ್ರಿಂಗ್ಸ್ ಪ್ರದೇಶದಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯ ರೂಪುರೇಷೆ ಅಂತಿಮಗೊಳಿಸುವ ಕುರಿತಂತೆ ಈ ಮಾತುಕತೆ ವೇಳೆ ಚರ್ಚಿಸಲಾಗುತ್ತದೆ" ಎಂದು ವರದಿಯಾಗಿದೆ.