ಬೆಂಗಳೂರು, ಎ.09 (DaijiworldNews/PY): ಬೆಂಗಳೂರು ಹಾಗೂ ಮಂಗಳೂರು ನಡುವೆ ನಾಲ್ಕು ದಿನ ಸಂಚರಿಸುತ್ತಿದ್ದ ವಿಶೇಷ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದ್ದು, ಎಪ್ರಿಲ್ 11ರಿಂದ ಈ ರೈಲುಗಳು ಸಂಚರಿಸಲಿವೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಇಂದು ಪ್ರಕಟಣೆ ಹೊರಡಿಸಿರುವ ರೈಲು ಅಧಿಕಾರಿಗಳು, "ಈ ಹಿಂದೆ ವಾರದಲ್ಲಿ ನಾಲ್ಕು ದಿನ ವಾಯಾ ಕುಣಿಗಲ್ ಮೇಲೆ ಸಂಚರಿಸುತ್ತಿದ್ದ ಬೆಂಗಳೂರು-ಮಂಗಳೂರು ವಿಶೇಷ ರೈಲು ಇನ್ನು ಪ್ರತಿ ದಿನ ಓಡಾಡಲಿದೆ" ಎಂದು ತಿಳಿಸಿದ್ದಾರೆ.
ಪ್ರತಿ ದಿನ ರಾತ್ರಿ 9.30ಕ್ಕೆ ವಿಶೇಷ ಎಕ್ಸಪ್ರೆಸ್ ಟ್ರೈನ್ ನಂಬರ್ 06515/06516 ಬೆಂಗಳೂರಿನಿಂದ ಹೊರಡಲಿದ್ದು, 7.55ಕ್ಕೆ ಮಂಗಳೂರಿಗೆ ತಲುಪಲಿದೆ. ಇದೇ ರೈಲು ರಾತ್ರಿ 8.10ಕ್ಕೆ ಹೊರಟು ಮರುದಿನ ಮುಂಜಾನೆ 6.50ಕ್ಕೆ ಬೆಂಗಳೂರಿಗೆ ಸಂಚರಿಸಲಿದೆ.
ಯಶವಂತಪುರ-ಕಾರವಾರ ರೈಲಿನ ವೇಳಾಪಟ್ಟಿಯಲ್ಲಿಯೂ ಇಂದು ಬದಲಾವಣೆಯಾಗಿದ್ದು, ಪ್ರತಿದಿನ ರಾತ್ರಿ 11.45ಕ್ಕೆ ಈ ರೈಲು ಯಶವಂತಪುರ ರೈಲು ನಿಲ್ದಾಣದಿಂದ ಹೊರಡಲಿದ್ದು, ಮಾರನೇ ದಿನ ಮಧ್ಯಾಹ್ನ 3.40ಕ್ಕೆ ತಲುಪಲಿದೆ. ಇದೇ ರೈಲು ಸಂಜೆ 4.40ಕ್ಕೆ ಕಾರವಾರ ರೈಲು ನಿಲ್ದಾಣದಿಂದ ಮರುಪ್ರಯಾಣ ಬೆಳೆಸಲಿದ್ದು, ಮರುದಿನ 11.45ಕ್ಕೆ ಯಶವಂತಪುರ ರೈಲು ನಿಲ್ದಾಣಕ್ಕೆ ತಲುಪಲಿದೆ.