ನವದೆಹಲಿ, ಏ. 09 (DaijiworldNews/HR): "ಕೊರೊನಾ ವಿರುದ್ಧದ ಲಸಿಕೆ ಕೊರತೆಯು ಒಂದು ಗಂಭೀರ ವಿಚಾರವಾಗಿದ್ದು, ಅದು ಉತ್ಸವ ಅಲ್ಲ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ಸೋಂಕಿನ ಎರಡನೇ ಅಲೆ ಜಾಸ್ತಿಯಾಗುತ್ತಿರುವ ಕಾರಣದಿಂದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಯವರೊಂದಿಗೆ ವಿಡಿಯೋ ಸಂವಾದ ನಡೆಸಿ ಗುರುವಾರ ಮಾತನಾಡಿದ್ದು, ಏಪ್ರಿಲ್ 11 ಹಾಗೂ 14 ರ ನಡುವೆ ದೇಶವ್ಯಾಪಿ 'ಲಸಿಕೆ ಉತ್ಸವ'ವನ್ನು ಆಚರಿಸಲು ಕರೆ ನೀಡಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಹೆಚ್ಚುತ್ತಿರುವ ಕೊರೊನಾ ಬಿಕ್ಕಟ್ಟಿನ ಮಧ್ಯೆ, ಲಸಿಕೆಗಳ ಕೊರತೆಯು ಬಹಳ ಗಂಭೀರವಾದ ವಿಷಯವಾಗಿದ್ದು, ಅದು 'ಉತ್ಸವ' ಅಲ್ಲ. ಯಾವುದೇ ಪಕ್ಷಪಾತವಿಲ್ಲದೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸಹಾಯ ಮಾಡಬೇಕು. ಈ ಸಾಂಕ್ರಾಮಿಕ ರೋಗವನ್ನು ನಾವು ಒಟ್ಟಾಗಿ ಸೋಲಿಸಬೇಕು "ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.