ಮಡಿಕೇರಿ, ಎ.09 (DaijiworldNews/PY): ಹಾರಂಗಿ ಹಿನ್ನೀರಿನಲ್ಲಿ ಸ್ನಾನಕ್ಕಿಳಿದು ಮೃತಪಟ್ಟ ಮೊಮ್ಮಗನ ಮೃತದೇಹ ಕಂಡು ಅಜ್ಜಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ರಮ್ಲಾನ್ ಎಂಬವವರ ಪುತ್ರ ಮುಬಾಶೀರ್ (18) ಗುರುವಾರ ಬೆಳಗ್ಗೆ ಸ್ನಾನ ಮಾಡಲೆಂದು ಹಾರಂಗಿ ಹಿನ್ನೀರಿಗೆ ಇಳಿದಿದ್ದು, ಬಳಿಕ ಕಾಣೆಯಾಗಿದ್ದ. ಆತನ ಮೃತದೇಹ ಶುಕ್ರವಾರ ಬೆಳಗ್ಗೆ ಹಾರಂಗಿ ಹಿನ್ನೀರಿನಲ್ಲಿ ದೊರೆತಿದೆ.
ಈ ವೇಳೆ ಮೊಮ್ಮಗನ ಮೃತದೇಹ ಕಂಡು ಆತನ ಅಜ್ಜಿ ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಅಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.