ಕೊಲ್ಕತ್ತಾ, ಏ. 09 (DaijiworldNews/HR): "ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಹಿಂದೂ ಹಾಗೂ ಮುಸ್ಲಿಂರನ್ನು ವಿಭಜಿಸುವುದರ ಮೂಲಕ ಸಮಾಜದಲ್ಲಿ ಸ್ವಾಸ್ಥ್ಯವನ್ನು ಕಳೆಯುತ್ತಿದ್ದಾರೆ" ಎಂದು ತೃಣ ಮೂಲ ಕಾಂಗ್ರೆಸ್ ನಾಯಕಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾದಿದ ಅವರು, "ಹತ್ತು ಚುನಾವಣಾ ಪ್ರಚಾರ ಸಭಾ ಕಾರಣದಿಂದಾಗಿ ನಾನು ಚುನಾವಣಾ ಆಯೋಗದಿಂದ ನೋಟೀಸ್ ಪಡೆದರೂ ಕೂಡ, ನಾನು ಎಲ್ಲರಿಗೂ ಮತವನ್ನು ಚಲಾಯಿಸಿ ಎಂದು ಹೇಳಿದ್ದೇನೆ ಹೋರತು ಬೇರೇನೂ ಹೇಳಿಲ್ಲ. ನನ್ನಲ್ಲಿ ಯಾವುದೇ ವಿಭಜನೆಗೆ ಅವಕಾಶವಿಲ್ಲ" ಎಂದರು.
ಇನ್ನು "ನರೇಂದ್ರ ಮೋದಿಯವರು ಪ್ರತಿದಿನ ಹಿಂದೂ ಮತ್ತು ಮುಸ್ಲಿಂರ ಬಗ್ಗೆ ಮಾತನಾಡುತ್ತಿದ್ದು, ಅವರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಯಾಕೆ? ನಂದಿಗ್ರಾಮ್ ಚುನಾವಣಾ ಪ್ರಚಾರದ ಸಂದರ್ಭದಲ್ಲಿ 'ಮಿನಿ ಪಾಕಿಸ್ತಾನ್' ಎಂಬ ಪದವನ್ನು ಉಚ್ಚರಿಸಿದವರ ವಿರುದ್ಧ ಎಷ್ಟು ದೂರುಗಳು ದಾಖಲಾಗಿವೆ ?" ಎಂದು ಪ್ರಶ್ನಿಸಿದ್ದಾರೆ.