ಕೋಝಿಕ್ಕೋಡ್ ಏ 9(DaijiworldNews/MS): ಕುವೈತ್ ಹಾರಾಟ ನಡೆಸಬೇಕಾಗಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವೊಂದು ಕೋಝಿಕ್ಕೋಡ್ ನಲ್ಲಿ ಏ.೯ ರ ಬೆಳಗ್ಗೆ ತುರ್ತು ಲ್ಯಾಂಡಿಂಗ್ ಮಾಡಿದೆ. ವಿಮಾನದ ಕಾರ್ಗೋ ಕಂಪಾರ್ಟ್ಮೆಂಟ್ನಲ್ಲಿ ಬೆಂಕಿ ಸೂಚಕ ಅಲಾರಂ ಎಚ್ಚರಿಕೆ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಪೈಲೆಟ್ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ.
" ಕ್ಯಾಲಿಕಟ್-ಕುವೈತ್ಗೆ ಹಾರಾಟ ನಡೆಸಬೇಕಾಗಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ನಲ್ಲಿ 17 ಪ್ರಯಾಣಿಕರಿದ್ದು , ಸರಕು ಸಾಗಾಟದ ಕಂಪಾರ್ಟ್ಮೆಂಟ್ ಬೆಂಕಿಯ ಎಚ್ಚರಿಕೆಯನ್ನು ಗಮನಿಸಿದ ಪೈಲಟ್ಗಳು ಮುನ್ನೆಚ್ಚರಿಕೆಯ ಕ್ರಮವಾಗಿ ತುರ್ತು ಭೂಸ್ಪರ್ಶ ಮಾಡಿದ್ದಾರೆ" ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ವಕ್ತಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.