ಕೇರಳ, ಏ. 08 (DaijiworldNews/HR): ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಪಿಣರಾಯಿ ವಿಜಯನ್ ಅವರು ಕೊರೊನಾ ಸೋಂಕಿನ ಪರೀಕ್ಷೆಗೆ ಒಳಗಾದ ಬಳಿಕ ಅವರಿಗೂ ಕೊರೊನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಪ್ರಸ್ತುತ ಕಣ್ಣೂರಿನ ಅವರ ಮನೆಯಲ್ಲಿದ್ದು, ಸದ್ಯದಲ್ಲೇ ಕೋಳಿಕೋಡ್ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಿಸಲಾಗುತ್ತಿರುವುದಾಗಿ ಮುಖ್ಯಮಂತ್ರಿ ಕಚೇರಿ ಮಾಹಿತಿ ನೀಡಿದೆ.
ಏಪ್ರಿಲ್ 6, ಮಂಗಳವಾರ ಸಾರ್ವಜನಿಕ ಸಂವಾದ ನಡೆಸಿದ್ದರು. ಸಿಎಂ ಪಿಣರಾಯಿ ಅವರ ಮಗಳು ವೀನಾ ವಿಜಯನ್ ಏಪ್ರಿಲ್ 6ರಂದು ಅವರಿಗೂ ಕೊರೊನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಹೀಗಾಗಿ ಸಂಜೆ 6 ಗಂಟೆಗೆ ಮತದಾನವನ್ನು ಪಿಪಿಇ ಕಿಟ್ ಧರಿಸಿ ಮಾಡಿದ್ದರು. ಈ ಬಳಿಕ ಅವರ ತಂದೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದ್ದು, ತಮ್ಮ ಸಂಪರ್ಕದಲ್ಲಿದ್ದು ಕೊರೊನಾ ಸೋಂಕಿನ ಲಕ್ಷಣಗಳಿದ್ದರೇ ಪರೀಕ್ಷೆಗೆ ಒಳಗಾಗುವಂತೆ ಸಿಎಂ ಮನವಿ ಮಾಡಿದ್ದಾರೆ.