ನವದೆಹಲಿ,ಏ. 08 (DaijiworldNews/HR): ಕೋಬ್ರಾ ಕಮಾಂಡೋ ಯೋಧ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ಸುಮಾರು 100 ಗಂಟೆಗೂ ಅಧಿಕ ಕಾಲ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದ ಮಾವೋವಾದಿ ನಕ್ಸಲರ ಗುಂಪು ಇಂದು ಬಿಡುಗಡೆ ಮಾಡಿರುವುದಾಗಿ ಛತ್ತಿಸ್ಘಡ ಸರ್ಕಾರ ಗುರುವಾರ ಹೇಳಿಕೆ ನೀಡಿದೆ.
ಎಪ್ರಿಲ್ 3ರಂದು ಬಸ್ತಾರ್ -ಬಿಜಾಪುರ ದಂಡಕಾರಣ್ಯ ಪ್ರದೇಶದಲ್ಲಿ ನಕ್ಸಲರು, ಯೋಧರೊಂದಿಗೆ ನಡೆದ ಗುಂಡಿನ ಕಾಳಗದ ವೇಳೆ 22 ಮಂದಿ ಯೋಧರು ಹುತಾತ್ಮರಾಗಿದ್ದು, ರಾಕೇಶ್ವರ್ ಸಿಂಗ್ ಅವರನ್ನು ಅಪಹರಿಸಲಾಗಿತ್ತು.
ಈ ಸಂದರ್ಭದಲ್ಲಿ ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಅವರನ್ನು ಮಾವೋವಾದಿಗಳು ಅಪಹರಿಸಿ ಬಳಿಕ ಇಂದು ಬಿಡುಗಡೆ ಮಾಡಿದ್ದಾರೆಂದು ಛತ್ತಿಸ್ಘಡ ಸರ್ಕಾರ ತಿಳಿಸಿದೆ.