ಮುಂಬೈ, ಏ 8 (DaijiworldNews/MS): ಬಾಲಿವುಡ್ ಸಿನಿಮಾ ನಿರ್ದೇಶಕ ಸಂತೋಷ್ ಗುಪ್ತಾ ಎಂಬುವರ ಹೆಂಡತಿ ಹಾಗೂ ಮಗಳು ಮನೆಯಲ್ಲಿ ಬೆಂಕಿ ಹಂಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂದೇರಿ ವಲಯದ ಡಿಎನ್ ನಗರದಲ್ಲಿ ಬುಧವಾರ ನಡೆದಿದೆ.
ಸಂತೋಷ್ ಗುಪ್ತಾ ಹೆಂಡತಿ ಆಶ್ಮಿತಾ (45) ಹಾಗೂ ಮಗಳು ಸೃಷ್ಠಿ ಗುಪ್ತಾ (15) ಎನ್ನುವವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಸೋಮವಾರ ಮಧ್ಯಾಹ್ನ ಅಂಧೇರಿ (ಪಶ್ಚಿಮ) ದ ಡಿ ಎನ್ ನಗರದಲ್ಲಿರುವ ತಮ್ಮ ಅಪಾರ್ಟ್ಮೆಂಟ್ನಲ್ಲಿ ತಾಯಿ ಮತ್ತು ಮಗಳು ಬೆಂಕಿ ಹಚ್ಚಿಕೊಂಡಿದ್ದು ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಆಶ್ಮಿತಾ ಧೀರ್ಘಕಾಲದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ತಾಯಿ ಕಷ್ಟ ನೋಡಲಾರದೇ ಮಗಳು ಸಹ ಸೂಸೈಡ್ ಮಾಡಿಕೊಂಡಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ.
ಆನಂದ ಗುಪ್ತಾ ಅವರು ಬಾಲಿವುಡ್ನಲ್ಲಿ ಪರಾರ್ ಎಂಬ ಸಿನಿಮಾವನ್ನು 2011 ರಲ್ಲಿ ನಿರ್ದೇಶಿಸಿದ್ದರು.