ಬೆಳಗಾವಿ, ಏ. 08 (DaijiworldNews/HR): "ಕಾಂಗ್ರೆಸ್ಗೆ ಎಲ್ಲ ಸಮಾಜದವರೂ ಬೇಕು, ಹಾಗಾಗಿ ನಾವು ನಾವು ಜಾತಿ ಮೇಲೆ ರಾಜಕಾರಣ ಮಾಡಲ್ಲ, ನೀತಿ ಮೇಲೆ ಮಾಡುತ್ತೇವೆ. ಲಿಂಗಾಯತ, ಮರಾಠ ಸಮುದಾಯವಿರಲಿ ಎಲ್ಲರೂ ನಮ್ಮ ಸಹೋದರಿದ್ದಂತೆ, ಬಿಜೆಪಿಯವರಂತೆ ನಾವು ಯಾರನ್ನೂ ಬೇರೆಯಾಗಿ ನೋಡುವುದಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ದೆಹಲಿಯ ಗಡಿಗಳಲ್ಲಿ ರೈತರು ಚಳವಳಿ ನಡೆಸುತ್ತಿದ್ದರೂ ಸರ್ಕಾರದ ಸ್ಪಂದಿಸದೆ ಇರುವುದಕ್ಕೆ ಎಲ್ಲರಲ್ಲೂ ಆಕ್ರೋಶವಿದ್ದು, ಸ್ವಾಭಿಮಾನಕ್ಕೆ ಧಕ್ಕೆ ಆಗಿರುವುದರಿಂದ ರೈತರೆಲ್ಲರೂ ನಮಗೆ ಉಪ ಚುನಾವಣೆಯಲ್ಲಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ" ಎಂದರು.
ಇನ್ನು "ನನ್ನ ರಾಜೀನಾಮೆ ಕೇಳಿರುವ ಲಖನ್ ಜಾರಕಿಹೊಳಿಗೆ ಒಳ್ಳೆಯದಾಗಲಿ, ಯಶಸ್ಸು ಸಿಗಲಿ' ಎಂದು ಪ್ರತಿಕ್ರಿಯಿಸಿದರು.
"ಸಾರಿಗೆ ನೌಕರರ ಮುಷ್ಕರಕ್ಕೆ ನಮ್ಮ ಬೆಂಬಲವಿದ್ದು, ಅವರು ಹೋರಾಟ ಮೊಟಕುಗೊಳಿಸಬಾರದು. ಸರ್ಕಾರ ಅವರ ನೋವನ್ನು ಕೇಳಬೇಕು. ಸಮಸ್ಯೆ ಪರಿಹರಿಸಬೇಕು" ಎಂದು ಒತ್ತಾಯಿಸಿದ್ದಾರೆ.