ಬೆಂಗಳೂರು, ಏ. 08 (DaijiworldNews/HR): ಬುಧವಾರ ಮಧ್ಯರಾತ್ರಿ ತಾಯಿ ಮತ್ತು ಮಗನ ಕೊಲೆಯಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಕೊಲೆಯಾದವರನ್ನು ಮಮತಾ ಬಸು(75) ಮತ್ತು ಇವರ ಪುತ್ರ ದೇವಬ್ರತಾ(41) ಎಂದು ಗುರುತಿಸಲಾಗಿದೆ.
ಒರಿಸ್ಸಾ ಮೂಲದ ಇವರು ಜೆಪಿ ನಗರದ ಸಂತೃಪ್ತಿ ನಗರದ ಪುಟ್ಟೇನಹಳ್ಳಿಯಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.
ದುಷ್ಕರ್ಮಿಯೊಬ್ಬ ಬುಧವಾರ ಮಧ್ಯರಾತ್ರಿ 1.30ರ ಸುಮಾರಿಗೆ ಬೈಕ್ನಲ್ಲಿ ಬಂದಿದ್ದ ತಾಯಿ-ಮಗನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಮನೆಯಲ್ಲಿದ್ದ ಲ್ಯಾಪ್ಟಾಪ್, ಮೊಬೈಲ್, ಚಿನ್ನಾಭರಣ, ಎಟಿಎಂ ಕಾರ್ಡ್ಗಳನ್ನು ಹೊತ್ತೊಯ್ದಿದ್ದಾನೆ ಎನ್ನಲಾಗಿದೆ.
ಇನ್ನು ದೇವಬ್ರತಾಗೆ ಬೆಂಗಳೂರಿನ ಕಾಲೇಜೊಂದರಲ್ಲಿ ಲೆಕ್ಟರರ್ ಕೆಲಸ ಸಿಕ್ಕಿದ್ದು, 20 ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು.
ಸ್ಥಳಕ್ಕೆ ಡಿಸಿಪಿ ಹರೀಶ್ ಪಾಂಡೆ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.