ಪಾಲಕ್ಕಾಡ್, ಎ.08 (DaijiworldNews/PY): ಪಾಲಕ್ಕಾಡ್ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮೆಟ್ರೋ ಮ್ಯಾನ್ ಇ ಶ್ರೀಧರನ್ ಅವರು ತಾವು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದು, "ಪಿಣರಾಯಿ ವಿಜಯ್ಗಿಂತ ನಾನು ಉತ್ತಮವಾದ ಸಿಎಂ ಆಗಬಲ್ಲೆ. ಬೇರೆ ರಾಜ್ಯಗಳ ಮುಖ್ಯಮಂತ್ರಿಗಳಿಗಿಂತಲೂ ಚೆನ್ನಾಗಿ ಕಾರ್ಯನಿರ್ವಹಿಸಬಲ್ಲೆ" ಎಂದಿದ್ದಾರೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಪಿಣರಾಯಿ ಸರ್ಕಾರ ಅನುಷ್ಠಾನಕ್ಕೆ ತಂಎಇರುವ ಹಲವಾರು ಯೋಜನೆಗಳನ್ನು ಸರಿಪಡಿಸಲಾಗುವುದು. ನನ್ನನ್ನು ಸಿಎಂ ಆಗುವಂತೆ ಬಿಜೆಪಿ ಕೇಳಿದ್ದಲ್ಲಿ ನಾನು ಬೇಡ ಎನ್ನುವುದಿಲ್ಲ. ಪಿಣರಾಯಿ ವಿಜಯ್ಗಿಂತ ನಾನು ಉತ್ತಮವಾದ ಸಿಎಂ ಆಗಬಲ್ಲೆ. ಬೇರೆ ರಾಜ್ಯಗಳ ಮುಖ್ಯಮಂತ್ರಿಗಳಿಗಿಂತಲೂ ಚೆನ್ನಾಗಿ ಕಾರ್ಯನಿರ್ವಹಿಸಬಲ್ಲೆ. ನಾನು ಇಡೀ ದೇಶದಲ್ಲಿ ಉತ್ತಮವಾದ ಸಿಎಂ ಎನಿಸಿಕೊಳ್ಳುವೆ" ಎಂದಿದ್ದಾರೆ.
"ವಿಜಯದ ಬಳಿಕ ಎಲ್ಲಾ ರೀತಿಯಾದ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ನಾನು ಪಾಲಕ್ಕಾಡ್ನಲ್ಲಿ ಹೆಚ್ಚು ಕಾಲ ಇರಲಿಲ್ಲ. ಆದರೂ ಎಲ್ಲರಿಗೂ ನನ್ನ ಬಗ್ಗೆ ತಿಳಿದಿದೆ. ನನ್ನ ಬಗ್ಗೆ ಆರು ಪುಸ್ತಕಗಳಿದ್ದು, ಆ ಪುಸ್ತಕಗಳನ್ನು ಹಲವು ಮಂದಿ ಓದಿದ್ದಾರೆ. ಪುಟ್ಟ ಮಕ್ಕಳಿಗೂ ಕೂಡಾ ನನ್ನ ಬಗ್ಗೆ ತಿಳಿದಿದೆ" ಎಂದು ಹೇಳಿದ್ದಾರೆ
"ಕೇರಳದಲ್ಲಿ ಬಿಜೆಪಿ 35 ಕ್ಷೇತ್ರಗಳನ್ನು ಗೆಲ್ಲುವುದಾಗಿ ಚುನಾವಣಾಪೂರ್ಣ ಸಮೀಕ್ಷೆಗಳು ತಿಳಿಸಿವೆ. ಬಿಜೆಪಿ 35 ಕ್ಷೇತ್ರಗಳಲ್ಲಿ ಜಯಗಳಿಸಿದರೆ ಕಿಂಗ್ ಮೇಕರ್ ಆಗಲಿದೆ" ಎಂದಿದ್ದಾರೆ.
ಎಪ್ರಿಲ್ 6ರಂದು ಕೇರಳದ ವಿಧಾನ ಸಭೆ ಚುನಾವಣೆ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಈಗ ಗೆಲುವುನ ಲೆಕ್ಕಾಚಾರ ಪ್ರಾರಂಭವಾಗಿದೆ.