ಚೆನ್ನೈ, ಎ.06 (DaijiworldNews/PY): ತಾಯಿ ಮತದಾನ ಮಾಡಲು ಹೋದ ವೇಳೆ ಒಂದು ತಿಂಗಳ ಕಂದಮ್ಮನನ್ನು ಜೋಪಾನವಾಗಿ ನೋಡಿಕೊಂಡ ಪೊಲೀಸ್ ಪೇದೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಪ್ರಿಲ್ 6ರಂದು ತಮಿಳನಾಡು ವಿಧಾನಸಭಾ ಚುನಾವಣೆಯ ವೇಳೆ ತಾಯಿಯೊಬ್ಬರು ತನ್ನ ಪುಟ್ಟ ಕಂದಮ್ಮನನ್ನು ಪೊಲೀಸ್ ಪೇದೆಯ ಕೈಯಲ್ಲಿ ನೀಡಿ ಮತದಾನ ಮಾಡಲು ಒಳಗೆ ಹೋಗಿದ್ದರು. ಈ ಸಂದರ್ಭ ಆ ಪುಟ್ಟ ಕಂದಮ್ಮನನ್ನು ಪೊಲೀಸ್ ಪೇದೆ ಜೋಪಾನವಾಗಿ ನೋಡಿಕೊಂಡಿದ್ದಾರೆ.
ಪೊಲೀಸ್ ಪೇದೆ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ದೃಶ್ಯವನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಪೊಲೀಸ್ ಪೇದೆಯ ಮಾನವೀಯತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಆಂಧ್ರಪ್ರದೇಶ ಪೊಲೀಸರು ಟ್ವೀಟ್ ಮಾಡಿದ್ದು, "ತಾಯಿ ಮತದಾನ ಮಾಡಲು ಬಂದ ಸಂದರ್ಭ ಒಂದು ತಿಂಗಳ ಮಗುವನ್ನು ಪೊಲೀಸ್ ಪೇದೆಯ ಬಳಿ ನೀಡಿ ಮತಗಟ್ಟೆಗೆ ತೆರಳಿದ್ದರು. ಈ ವೇಳೆ ತಮಿಳುನಾಡು ಚುನಾವಣೆಗಾಗಿ ಕಾರ್ಯಕ್ಕಾಗಿ ನಿಯೋಜನೆಗೊಂಡಿದ್ದ ಪೊಲೀಸ್ ಪೇದೆ, ತಾಯಿ ಕೇಂದ್ರದಿಂದ ವಾಪಾಸ್ಸಾಗುವವರೆಗೂ ಪುಟ್ಟ ಕಂದಮ್ಮನನ್ನು ಜೋಪಾನವಾಗಿ ನೋಡಿಕೊಂಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ" ಎಂದು ತಿಳಿಸಿದ್ದಾರೆ.