ಮಸ್ಕಿ, ಎ.06 (DaijiworldNews/PY): "ಬಸನಗೌಡ ಪಾಟೀಲ ಯತ್ನಾಳ್ಗೆ ಈಗಾಗಲೇ ಪಕ್ಷದಿಂದ ನೋಟಿಸ್ ನೀಡಲಾಗಿದೆ. ಅವರ ಬಗ್ಗೆ ಮಾತನಾಡಿದರೆ ಅರೆಹುಚ್ಚ ಆಗುತ್ತೇನೆ" ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಈಗಾಗಲೇ ಪಕ್ಷದಿಂದ ಯತ್ನಾಳ್ ಅವರಿಗೆ ನೋಟಿಸ್ ನೀಡಲಾಗಿದೆ. ಅವರೇ ಈ ವಿಚಾರದ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ. ನಾನು ಉಪಚುನಾವಣೆಯ ಪ್ರಚಾರದ ಬಗ್ಗೆ ಮಾತ್ರ ಪ್ರತಿಕ್ರಿಯೆ ನೀಡುತ್ತೇನೆ" ಎಂದಿದ್ದಾರೆ.
"ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಈಶ್ವರಪ್ಪ ಹಾಗೂ ಯತ್ನಾಳ್ ಅವರಿಗೆ ಆರ್ಎಸ್ಎಸ್ ಬೆಂಬಲ ಇದೆ ಎಂದಿದ್ದಾರೆ. ಆದರೆ, ಕತ್ತರಿಹಾಕುವ ಕಾರ್ಯವನ್ನು ಎಂದಿಗೂ ಆರ್ಎಸ್ಎಸ್ ಮಾಡುವುದಿಲ್ಲ. ಬದಲಾಗಿ ಅದು, ಸೂಜಿ ದಾರದಂತೆ ಜೋಡಿಸುವ ಕಾರ್ಯವನ್ನು ಮಾಡುತ್ತದೆ" ಎಂದು ತಿಳಿಸಿದ್ದಾರೆ.