ನವದೆಹಲಿ, ಏ.06 (DaijiworldNews/SM): ಕೇರಳ, ಪುದುಚೇರಿ ತಮಿಳುನಾಡು ವಿಧಾನಸಭೆಗೆ ಮಂಗಳವಾರ ಒಂದೇ ಹಂತದಲ್ಲಿ ಚುನಾವಣೆ ನಡೆದಿದೆ. ಚುನಾವಣೆಯಲ್ಲಿ ಉತ್ತಮ ಮತದಾನವಾಗಿರುವ ಬಗ್ಗೆ ವರದಿಯಾಗಿದೆ.
ಅಸ್ಸಾಂನಲ್ಲಿ ಮೂರನೇ ಹಾಗೂ ಕೊನೆ ಹಂತದ ಮತದಾನ, ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ಶಾಂತಿಯುತವಾಗಿ ನಡೆದಿದೆ. ಸಂಜೆ ಏಳು ಗಂಟೆಯ ತನಕ ಲಭಿಸಿದ ವಿವರಗಳ ಪ್ರಕಾರ ಕೇರಳದಲ್ಲಿ 73.58%, ತಮಿಳುನಾಡಿನಲ್ಲಿ 65.11%, ಅಸ್ಸಾಂನಲ್ಲಿ 82.29% ಪುದುಚೇರಿಯಲ್ಲಿ 78.13% ಮತ್ತು ಪಶ್ಚಿಮ ಬಂಗಾಳದಲ್ಲಿ 77.38% ಮತದಾನವಾಗಿದೆ.
ಇಂದು ನಡೆದ ಚುನಾವಣೆ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.