ಕಲಬುರಗಿ, ಏ. 06 (DaijiworldNews/HR): "ಆನ್ಲೈನ್ ಗ್ಯಾಂಬ್ಲಿಂಗ್ ನಿಷೇಧಿಸುವ ಉದ್ದೇಶದಿಂದ ಕಾನೂನು ಜಾರಿಗೆ ಸಂಬಂದ ಅಧ್ಯಯನ ನಡೆದಿದೆ" ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಬಸವಕಲ್ಯಾಣದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆನ್ಲೈನ್ ಗ್ಯಾಂಬ್ಲಿಂಗ್ ನಿಷೇಧ ಸಂಬಂಧವಾಗಿ ಅಧಿಕಾರಿಗಳು ಬೇರೆ ರಾಜ್ಯಗಳಿಗೆ ಹೋಗಿ ಅಧ್ಯಯನ ನಡೆಸುತ್ತಿದ್ದು, ಅವರ ವರದಿ ಹಾಗೂ ಮಾಹಿತಿ ಸಂಗ್ರಹದ ನಂತರ ಕಾಯ್ದೆ ತರಲಾಗುವುದು" ಎಂದು ಸ್ಪಷ್ಟ ಪಡಿಸಿದ್ದಾರೆ.
ಇನ್ನು ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣದ ಕುರಿತು ಮಾತನಾಡಿದ ಅವರು, "ಸಿಡಿ ಪ್ರಕರಣ ಕುರಿತು ನ್ಯಾಯ ಸಮ್ಮತ ಕೆಲಸ ಮಾಡಲು ಸೂಚನೆ ನೀಡಿದ್ದು, ನಾವು ಸತ್ಯದ ಪರವಾಗಿದ್ದೇವೆ. ಯಾರ ಪರ ಅಥವಾ ವಿರೋಧವಾಗಿ ಇಲ್ಲ" ಎಂದು ಸಚಿವರು ತಿಳಿಸಿದ್ದಾರೆ.