ಹುಬ್ಬಳ್ಳಿ, ಏ. 06 (DaijiworldNews/HR): "ನಾಳೆ ಕರ್ನಾಟಕದಾದ್ಯಂತ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಠ ಮಾಡದೆ ಮುಷ್ಕರವನ್ನು ವಾಪಸ್ಸು ಪಡೆಯಿರಿ" ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನೀವು ಸರ್ಕಾರದ ಮುಂದಿಟ್ಟರುವ 9 ಬೇಡಿಕೆಗಳಲ್ಲಿ 8ನ್ನು ಈಡೇರಿಸಿದ್ದೇವೆ. ಸಾರ್ವಜನಿಕ ಹಿತ ದೃಷ್ಟಿಯಿಂದ ನಾವೆಲ್ಲರೂ ದುಡಿಯಬೇಕು" ಎಂದರು.
ಇನ್ನು "ಸರ್ಕಾರ ಬಿಗಿಯಾಗಿ ಕ್ರಮ ಕೈಗೊಳ್ಳಲು ಅವಕಾಶ ಕೊಡಬೇಡಿ, ಮುಷ್ಕರದ ಹಿನ್ನೆಲೆಯಲ್ಲಿ ನಾವು ಈಗಾಗಲೇ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದ್ದೇವೆ" ಎಂದು ಹೇಳಿದ್ದಾರೆ.