ಕೊಯಮತ್ತೂರು, ಏ. 06 (DaijiworldNews/HR): "ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ಮುನ್ನ ರಾತ್ರೋ ರಾತ್ರಿ ರಾಜಕೀಯ ಪಕ್ಷಗಳು ಜನರಿಗೆ ಹಣ ಹಂಚಿವೆ" ಎಂದು ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸ್ಥಾಪಕ,ನಟ ಕಮಲ್ ಹಾಸನ್ ಆರೋಪಿಸಿದ್ದಾರೆ.
ಈ ಕುರಿತು ಕೋಯಮತ್ತೂರಿನ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಯವರಿಗೆ ದೂರು ನೀಡಿದ ಕಮಲ್, "ತುಂಬಾ ಮೋಸದಿಂದ ಹಾಗೂ ತ್ವರಿತ ಗತಿಯಲ್ಲಿ ಹಣ ಹಂಚಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ.
ಇನ್ನು "ನಾವು ಹಣ ಹಂಚಿದವರಲ್ಲಿ ಕೆಲವರನ್ನು ಕಂಡು ಹಿಡಿದಿದ್ದು, ಚುನಾವಣಾ ಅಧಿಕಾರಿಗಳು ಆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ನಾವು ಪ್ರತಿಭಟನೆ ಮಾಡುವುದಾಗಲಿ ಅಥವಾ ಮತದಾನ ಪಕ್ರಿಯೆಗೆ ತಡೆವೊಡ್ಡುವುದಾಗಲಿ ಮಾಡುವುದಿಲ್ಲ" ಎಂದು ಹೇಳಿದ್ದಾರೆ.