ಸೂರತ್,ಏ 06(DaijiworldNews/MS): ಗುಜರಾತ್ನಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆ ಹಿನ್ನೆಲೆಯಲ್ಲಿ, ವೆಂಟಿಲೇಟರ್ಗಳ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನಲೆಯಲ್ಲಿ ವೆಂಟಿಲೇಟರ್ ಗಳನ್ನು ಕಸ ಸಾಗಿಸುವ ಟ್ರಕ್ನಲ್ಲಿ ಸಾಗಿಸಿದ ಘಟನೆ ಬೆಳಕಿಗೆ ಬಂದಿದೆ.
ಗುಜರಾತ್ನಲ್ಲಿ ದೈನಂದಿನ ಕೊರೊನಾ ವೈರಸ್ ಪ್ರಕರಣ ಸೋಮವಾರ 3,000ಕ್ಕೆ ತಲುಪಿದೆ. ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಗಳ ಕೊರತೆಯನ್ನು ಗಮನಿಸಿದ ಗುಜರಾತ್ ಸರ್ಕಾರವು ವೆಂಟಿಲೇಟರ್ಗಳನ್ನು ವಲ್ಸಾದ್ನಿಂದ ಸೂರತ್ಗೆ ಸಾಗಿಸಲು ಆದೇಶಿಸಿತ್ತು. ಆದೇಶವನ್ನು ಅನುಸರಿಸಿ, ಸೂರತ್ ಮಹಾನಗರ ಪಾಲಿಕೆಯೂ ವಲ್ಸಾದ್ನಿಂದ ವೆಂಟಿಲೇಟರ್ಗಳನ್ನು ತರಲು ಕಸದ ಟ್ರಕ್ ಕಳುಹಿಸಿಕೊಟ್ಟಿದೆ.
ಸೂರತ್ ನಗರ ಪಾಲಿಕೆಯು ತ್ಯಾಜ್ಯ ವಿಲೇವಾರಿ ಟ್ರಕ್ನಲ್ಲಿ ವೆಂಟಿಲೇಟರ್ಗಳನ್ನು ಸರಬರಾಜು ಮಾಡಿರುವ ಬಗ್ಗೆ ತಮಗೆ ಮಾಹಿತಿ ಬಂದಿದ್ದು, ಈ ಕುರಿತು ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ವಲ್ಸದ್ ಡಿಸಿ ಆರ್ ಆರ್ ರಾವಲ್ ತಿಳಿಸಿದ್ದಾರೆ.
ಗುಜರಾತ್ನಲ್ಲಿ ಸೋಮವಾರ ಮೊದಲ ಬಾರಿಗೆ ದೈನಂದಿನ ಕೋವಿಡ್ ಪ್ರಕರಣ 3,000 ಗಡಿ ದಾಟಿದೆ. 3,160 ಹೊಸ ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳು 3,21,598ಕ್ಕೆ ಏರಿಕೆಯಾಗಿದೆ.