ನವದೆಹಲಿ, ಏ 06(DaijiworldNews/MS): ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದ್ದು, ಕರ್ಮ ಎನ್ನುವುದು ಒಬ್ಬರ ಕ್ರಿಯೆಯ ಖಾತೆ ಮತ್ತು ಇದರಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಭಾರತ-ಫ್ರಾನ್ಸ್ ನಡುವಿನ ರಫೇಲ್ ಯುದ್ಧ ವಿಮಾನ ಒಪ್ಪಂದದ ಕುರಿತು ಮತ್ತೆ ವಿವಾದ ಭುಗಿಲೆದ್ದಿದ್ದು, ರಫೇಲ್ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸಾಲ್ಟ್ಭಾರತೀಯ ಮಧ್ಯವರ್ತಿಗೆ ಒಂದು ಮಿಲಿಯನ್ ಯುರೋ ಲಂಚ ನೀಡಿದೆ ಫ್ರೆಂಚ್ ಮಾಧ್ಯಮ ವರದಿಯ ಹಿನ್ನಲೆಯಲ್ಲಿ ರಾಹುಲ್ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ರಫೇಲ್ ಯುದ್ಧ ವಿಮಾನದ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಮೊದಲಿನಿಂದಲೂ ರಾಹುಲ್ ಗಾಂಧಿ ಆರೋಪ ಮಾಡಿಕೊಂಡು ಬಂದಿದ್ದಾರೆ. ಈ ಒಪ್ಪಂದದಲ್ಲಿ ಕುರಿತು ರಾಹುಲ್ ಗಾಂಧಿಯವರು ಪದೇ ಪದೇ ಭ್ರಷ್ಟಾಚಾರದ ನಡೆದಿರುವುದನ್ನು ಹೇಳುತ್ತಲೇ ಬಂದಿದ್ದಾರೆ, ಫ್ರೆಂಚ್ ಮಾಧ್ಯಮ ವರದಿಯ ನಂತರ ಇದಕ್ಕೆ ಮತ್ತಷ್ಟು ಸ್ಪಷ್ಟತೆ ದೊರಕಿದೆ ಎಂದು ಕಾಂಗ್ರೆಸ್ ಹೇಳಿದೆ.
ಕರ್ಮ = ಒಬ್ಬರ ಕ್ರಿಯೆಯ ಖಾತಾಪುಸ್ತಕ. ಇದರಿಂದ ಯಾರಿಗೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹ್ಯಾಶ್ ಟ್ಯಾಗ್ . # ರಾಫೆಲ್," ರಾಹುಲ್ ಗಾಂಧಿ ಟ್ವಿಟ್ಟನಲ್ಲಿ ಕಮೆಂಟ್ ಮಾಡಿದ್ದು ಇದೇ ರೀತುಅ ಟ್ವೀಟ್ ಅನ್ನು ಹಿಂದಿಯಲ್ಲೂ ಹಾಕಿದ್ದಾರೆ.