ರಾಯ್ ಪುರ , ಏ 06(DaijiworldNews/MS): ಕೋಬ್ರಾ ಬೆಟಾಲಿಯನ್ ನ ಕಮಾಂಡೋ ರಾಕೇಶ್ವರ್ ಸಿಂಗ್ ಮಿನ್ಹಾಸ್ ಕಾಣೆಯಾದ ಬಳಿಕ ಆತನ ಮನೆಯವರೆಲ್ಲರೂ ಕಣ್ಣೀರಿನಲ್ಲೇ ಕ್ಷಣ ಕ್ಷಣವನ್ನು ಕಳೆಯುತ್ತಿದ್ದು, ಮಾವೋವಾದಿ ಸೆರೆಯಿಂದ ತನ್ನ ತಂದೆಯ ಬಿಡುಗಡೆಗಾಗಿ ರಾಕೇಶ್ವರ್ ಸಿಂಗ್ ೫ ವರ್ಷದ ಪುತ್ರಿ ಮಾಡುತ್ತಿರುವ ಭಾವನಾತ್ಮಕ ಮನವಿ ಎಲ್ಲರ ಮನಕಲಕುವಂತಿದೆ.
"ನಕ್ಸಲ್ ಅಂಕಲ್ ದಯವಿಟ್ಟು, ನನ್ನ ತಂದೆಯನ್ನು ಬಿಟ್ಟು ಮನೆಗೆ ಕಳುಹಿಸಿ, ನಾನು ಅಪ್ಪನನ್ನು ತುಂಬಾ ಪ್ರೀತಿಸುತ್ತಿದ್ದು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ(ಪಾಪಾ ಕಿ ಪಾರಿ ಪಾಪಾ ಕೋ ಬೋಹತ್ ಮಿಸ್ ಕರ್ ರಾಹಿ ಹೈ. ಮೈ ಅಪ್ನೆ ಪಾಪಾ ಸೆ ಬೋಹತ್ ಪ್ಯಾರ್ ಕಾರ್ತಿ ಹುನ್. ಪ್ಲೀಸ್ ನಕ್ಸಲ್ ಅಂಕಲ್, ಪಾಪಾ ಕೋ ಘರ್ ಭೆಜ್ದೋ) ಎನ್ನುವ ಐದು ವರ್ಷದ ಶ್ರಾಗ್ವಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ಮಿನ್ಹಾಸ್ ಅವರ ಮಗಳನ್ನು ಹೊರತುಪಡಿಸಿ, ಅವರ 7 ವರ್ಷದ ಸೋದರಳಿಯ ಆಕಾಶ್ ಕೂಡ ತನ್ನ ಚಿಕ್ಕಪ್ಪ ಎಲ್ಲಿದ್ದಾರೆ ಎಂದು ವಿಚಾರಿಸುತ್ತಿದ್ದಾರೆ. 'ಅಂಕಲ್, ನೀವು ಮಾಧ್ಯಮದಲ್ಲಿಇದ್ದೀರಿ, ನನ್ನ ಚಿಕ್ಕಪ್ಪ ಎಲ್ಲಿದ್ದಾರೆ ನಿಮಗೆ ತಿಳಿದಿರಬೇಕು,' ಎಂದು ಅವರು ತಮ್ಮ ಮನೆಗೆ ಬರುತ್ತಿದ್ದ ವರದಿಗಾರರನ್ನು ಪ್ರಶ್ನಿಸತೊಡಗಿದ್ದಾರೆ.
ಮಿನ್ಹಾಸ್ ಅವರ 75 ವರ್ಷದ ತಾಯಿ ಕುಂತಿ ದೇವಿ, ಸರ್ಕಾರವು ಮಾವೋವಾದಿಗಳೊಂದಿಗೆ ಮಾತುಕತೆ ನಡೆಸಿ ತನ್ನ ಮಗನನ್ನು ಶೀಘ್ರ ಬಿಡುಗಡೆ ಮಾಡುವ ಎಂಬ ಭರವಸೆ ಇದೆ ಕಣ್ಣೀರು ಹಾಕುತ್ತಲೇ ನುಡಿಯುತ್ತಾರೆ.
"ನನ್ನ ಪತಿ ಕೂಡ ಸಿಆರ್ಪಿಎಫ್ನಲ್ಲಿದ್ದರು ಮತ್ತು ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ನನ್ನ ಮಗ ತಂದೆಯಿಂದ ಸ್ಫೂರ್ತಿ ಸಿಆರ್ಪಿಎಫ್ಗೆ ಸೇರಿದ್ದಾನೆ. ನನ್ನ ಮಗನನ್ನುವಾಪಾಸ್ ಕರೆತರಲು ಸರ್ಕಾರವು ಯಾವುದೇ ಎಲ್ಲ ರೀತಿಯ ಪ್ರಯತ್ನ ಮಾಡುತ್ತದೆ ಎಂದು ನಂಬಿದ್ದೇನೆ, "ಎಂದು ಅವರು ಹೇಳಿದರು.
"ಈ ಸಮಯದಲ್ಲಿ, ಇಡೀ ಸಿಆರ್ಪಿಎಫ್ ಪಡೆ ಮತ್ತು ಕೇಂದ್ರ ಸರ್ಕಾರವು ಈ ಕುಟುಂಬದೊಂದಿಗೆ ನಿಂತಿದೆ ಎಂದು ಕುಟುಂಬಕ್ಕೆ ಭರವಸೆ ನೀಡಲು ನಾನು ಇಲ್ಲಿಗೆ ಬಂದಿದ್ದೇನೆ, ಈ ಕಾರ್ಯಾಚರಣೆಯಲ್ಲಿ ನಾವು ನಮ್ಮ ಧೈರ್ಯಶಾಲಿ ಕಮಾಂಡೋಗಳನ್ನು ಕಳೆದುಕೊಂಡಿದ್ದೇವೆ. ಆದರೆ ನಾವು ಅವರ ಮಗನನ್ನು ವಾಪಾಸು ಕರೆತರುತ್ತೇವೆ ಎಂಬ ಭರವಸೆ ಇದೆ್ ”ಎಂದು ಸಿಆರ್ಪಿಎಫ್ ಕೇಂದ್ರ ಕಚೇರಿಯ ಕಮಾಂಡೆಂಟ್ ಪಿಸಿ ಗುಪ್ತಾ ಹೇಳಿದ್ದಾರೆ.