ಹೊಸದಿಲ್ಲಿ, ಏ. 06 (DaijiworldNews/HR): ಭಾರತದ ಮುಖ್ಯ ನ್ಯಾಯಾಧೀಶರನ್ನಾಗಿ ಜಸ್ಟಿಸ್ ಎನ್. ವಿ. ರಮಣ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇಮಕ ಮಾಡಿದ್ದು,ಎಪ್ರಿಲ್ 24ರಂದು ಸಿಜೆಐ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೋಬ್ಡೆ ಅವರು ಎಪ್ರಿಲ್ 23ರಂದು ನಿವೃತ್ತಿಯಾಗಲಿದ್ದು, ಕಳೆದ ತಿಂಗಳು ತನ್ನ ಉತ್ತರಾಧಿಕಾರಿಯಾಗಿ ಎನ್. ವಿ. ರಮಣ ಅವರ ಹೆಸರನ್ನು ಶಿಫಾರಸು ಮಾಡಿದ್ದರು.
ಜಸ್ಟಿಸ್ ರಮಣ ಅವರು ಆಗಸ್ಟ್ 27, 1957ರಲ್ಲಿ ಜನಿಸಿದ್ದು, ಒಂದು ವರ್ಷ ನಾಲ್ಕು ತಿಂಗಳ ಕಾಲ ಆಗಸ್ಟ್ 26, 2022ರ ತನಕ ದೇಶದ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಲಿದ್ದಾರೆ.