ಬೆಂಗಳೂರು, ಎ.06 (DaijiworldNews/MB) : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕುಟುಂಬಕ್ಕೆ ಬಿಜೆಪಿಯ ಅನುವಂಶಿಕ ಮಾಲೀಕತ್ವ ಸಿಗುವುದಿಲ್ಲ. ಯಡಿಯೂರಪ್ಪ ಬಿಜೆಪಿಯ ಮಾಲೀಕರೇನಲ್ಲ ಎಂದು ಮಾಜಿ ಸಚಿವ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
"ಬಿಜೆಪಿ ಯಡಿಯೂರಪ್ಪ ಅವರ ಸ್ವಂತದ್ದಲ್ಲ. ಅವರು ನಮ್ಮ ಪಕ್ಷದ ನಾಯಕರು. ಬಿಜೆಪಿಗೆ ಸಂಬಂಧಿಸಿದಂತೆ, ಅದರ ಕಾರ್ಯಕರ್ತರು ಪಕ್ಷದ ಮಾಲೀಕರು" ಎಂದು ರವಿ ಹೇಳಿದರು.
''ಇತರ ಎಲ್ಲ ಪಕ್ಷಗಳು ಆನುವಂಶಿಕ ಕುಟುಂಬ ಮಾಲೀಕತ್ವದ ನಿಯಮವನ್ನು ಅನುಸರಿಸುತ್ತವೆ. ಆದರೆ ಬಿಜೆಪಿ ಈ ತತ್ವ ಆಳವಾಗಿ ಬೇರೂರಲು ಬಿಟ್ಟಿಲ್ಲ'' ಎಂದು ಕೂಡಾ ಹೇಳಿದರು.
"ಎಲ್ಲಾ ನಿರ್ಧಾರಗಳನ್ನು ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ. ಮೋದಿ, ಅಮಿತ್ ಶಾ, ಯಡಿಯೂರಪ್ಪ ಮೊದಲಾದವರು ನಮ್ಮ ಪಕ್ಷದ ನಾಯಕರು, ಆದರೆ ನಮ್ಮ ಕಾರ್ಯಕರ್ತರು ನಮ್ಮ ಮಾಲೀಕರು. ಕೆಲವು ನಾಯಕರ ಮಕ್ಕಳು ಪಕ್ಷದಲ್ಲಿ ಶ್ರೇಷ್ಠ ಸ್ಥಾನಗಳನ್ನು ಪಡೆಯಬೇಕಾದರೆ, ಸಂಸದೀಯ ಮಂಡಳಿಯು ನಿರ್ಧಾರ ಕೈಗೊಳ್ಳಬೇಕಾಗಿದೆ" ಎಂದು ಅವರು ತಿಳಿಸಿದರು.