ಮಡಿಕೇರಿ, ಏ 06 (DaijiworldNews/MS): ಪೊನ್ನಂಪೇಟೆ ತಾಲೂಕಿನ ಮುಗುಟಗೇರಿಯಲ್ಲಿ ಏ.೩ ರಂದು ಮನೆಯ ಹೆಂಚು ತೆಗೆದು ಪೆಟ್ರೋಲ್ ಸುರಿದು 7 ಮಂದಿ ಅಮಾಯಕರ ಹತ್ಯೆಗೆ ಕಾರಣವಾಗಿದ್ದ ಆರೋಪಿ ಮಣಿ ಎರವರ ಭೋಜ (55) ನ ಮೃತದೇಹ ಮಂಗಳವಾರ ಮುಂಜಾನೆ ಹೆಣವಾಗಿ ಪತ್ತೆಯಾಗಿದೆ.
ಶುಕ್ರವಾರ ಕುಡಿದು ಬಂದ ಭೋಜ , ಮಂಜ ಎಂಬುವವರ ಮನೆ ಬಾಗಿಲು ಲಾಕ್ ಮಾಡಿ ಬೆಂಕಿ ಹಚ್ಚಿದ್ದ. ಮನೆಯಲ್ಲಿದ್ದ ಕುಟುಂಬ ಸದಸ್ಯರು ಹೊರಬರಲಾಗದೇ ಪರದಾಡಿ ಸಜೀವ ದಹನವಾಗಿದ್ದರು. ನಾಲ್ಕು ಮಕ್ಕಳು ಇಬ್ಬರು ಮಹಿಳೆಯರು ಸೇರಿ 7 ಜನರು ಧಾರುಣವಾಗಿ ಮೃತಪಟ್ಟಿದ್ದರು.
ಭೋಜಬೋಜ ಹಲವರಿಗೆ ಕರೆ ಮಾಡಿ ತಾನು ಮನೆಗೆ ಬೆಂಕಿ ಹಾಕಿದ್ದಾಗಿ ಹೇಳಿದ್ದ. ಅಂದಿನಿಂದ ನಾಪತ್ತೆಯಾಗಿದ್ದ ಈತನ ಪತ್ತೆಗೆ ದಕ್ಷಿಣ ವಲಯ ಪೊಲೀಶ್ ಮಹಾ ನಿರ್ದೇಶಕ ಪ್ರವೀಣ್ ಮಧುಕರ್ ಪವಾರ್ ಅವರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕ್ಷಮಾ ಮಿಶ್ರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ಆರೋಪಿ ಪತ್ತೆಯಾಗದ ಹಿನ್ನಲೆಯಲ್ಲಿ ಸಾರ್ವಜನಿಕ ಪ್ರಕಟಣೆಯೂ ಹೊರಡಿಸಲಾಗಿತ್ತು.