ಮಸ್ಕಿ, ಏ.05 (DaijiworldNews/HR): "ದೀನದಲಿತರಿಗೆ ಕಾಂಗ್ರೆಸ್ ಪಕ್ಷವು ಮಾಡಿದ ಅನ್ಯಾಯದ ಅರಿವು ಈಗ ಆಗಿದ್ದು, ಕಾಂಗ್ರೆಸ್ ಪಕ್ಷವನ್ನು ದೇಶದಿಂದ ಮುಕ್ತಗೊಳಿಸಬೇಕೆನ್ನುವ ಬಿಜೆಪಿ ಸಂಕಲ್ಪ ಈಡೇರುತ್ತಿದೆ" ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಈ ಕುರಿತು ಮಸ್ಕಿ ಬಿಜೆಪಿ ಕಚೇರಿ ಆವರಣದಲ್ಲಿ ನಡೆದ ಡಾ. ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ದೀನದಲಿತರಿಗೆ ಮಾದಿರುವ ಅನ್ಯಾಯದ ಅರಿವು ಈಗ ಆಗಿದೆ" ಎಂದರು.
ಇನ್ನು "ಪರಿಶಿಷ್ಟ ಜಾತಿಯವರು ಬೆಂಬಲಿಸಿದ್ದರಿಂದ ದೇಶದಲ್ಲಿ ಬಿಜೆಪಿ ಶಕ್ತಿ ಹೆಚ್ಚಾಗುತ್ತಿದ್ದು, ಮುಂಬರುವ ದಿನಗಳಲ್ಲಿ ದೇಶ ಕಾಂಗ್ರೆಸ್ ಮುಕ್ತವಾಗಲಿದೆ" ಎಂದು ಹೇಳಿದ್ದಾರೆ.