ಮಡಿಕೇರಿ, ಎ.05 (DaijiworldNews/PY): "ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ಇಬ್ಬರು ಒಂದೇ. ಆದರೆ, ನೀವು ಅವರನ್ನು ಬೇರೆ ಎಂದು ಭಾವಿಸಿರಬಹುದು" ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಡಿಕೇರಿಯ ಬಾಗಮಂಡಲ ಸಮೀಪದ ಕೋರಂಗಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳಿವೆ. ಈ ಗೊಂದಲಗಳನ್ನು ರಾಜ್ಯ ಉಸ್ತುವಾರಿ ಸಚಿವ ಪಂಚ ರಾಜ್ಯಗಳ ಚುನಾವಣೆಯ ಬಳಿಕ ಸರಿಪಡಿಸಲಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಯಾವುದೇ ಸರ್ಕಾರಗಳಿದ್ದ ವೇಳೆ ಗೊಂದಲ, ವ್ಯತ್ಯಾಸಗಳಿರುವುದು ಸಾಮಾನ್ಯ" ಎಂದರು.
"ಕೆಲವು ಬಾರಿ ಆಗಾಗ ಗುಡುಗು-ಸಿಡಿಲು ಬಂದು ಹೋಗುತ್ತವೆ. ಬಳಿಕ ಅದೆಲ್ಲವೂ ತಣ್ಣಗಾಗಿ ಸರಿಯಾಗುತ್ತವೆ. ಸಿಎಂ ಅವರು ಸಮರ್ಥರಾಗಿದ್ದು, ಅವರು ಬಡವರ ಪರ ಹಾಗೂ ಅಭಿವೃದ್ದಿಯ ಕಾರ್ಯಗಳನ್ನು ಮಾಡುತ್ತಿದ್ದಾರೆ" ಎಂದು ತಿಳಿಸಿದರು.