ವಿಜಯಪುರ, ಏ.05 (DaijiworldNews/HR): ವಿಜಯಪುರದ ಇಂಜಿ ತಾಲೂಕಿನ ತಾಂಬಾದ ಪ್ರಾಥಮಿಕ ಆರೋಗ್ಯ ಕೇಂದ್ರದ ವಾರ್ಡ್ನ ಬೆಡ್ ಮೇಲೆ ಆಶಾ ಕಾರ್ಯಕರ್ತೆ ಗ್ರಾಮ ಪಂಚಾಯಿತಿ ಸದಸ್ಯನೊಂದಿಗೆ ಲವ್ವಿಡವ್ವಿ ನಡೆಸಿರುವ ಘಟನೆ ನಡೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.
ಆಶಾ ಕಾರ್ಯಕರ್ತೆಯ ಸಮವಸ್ತ್ರದಲ್ಲಿದ್ದ ಆಶಾ ಕಾರ್ಯಕರ್ತೆ, ಗ್ರಾಮ ಪಂಚಾಯತ್ ಸದಸ್ಯರೊಬ್ಬರೊಂದಿಗೆ ಬೆಡ್ ನಲ್ಲಿ ರೊಮ್ಯಾನ್ಸ್ ನಲ್ಲಿ ತೊಡಗಿರುವಂತ ದೃಶ್ಯ ಆಸ್ಪತ್ರೆಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿದು ಬಂದಿದೆ.
ಆಶಾ ಕಾರ್ಯಕರ್ತೆಯೊಂದಿಗಿದ್ದ ಯುವಕನನ್ನು ಗ್ರಾಮ ಪಂಚಾಯ್ತಿ ಸದಸ್ಯ ದೇವಪ್ಪ ಕರಿಯಪ್ಪ ಪೂಜಾರಿ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.