ವಿಜಯಪುರ, ಎ.05 (DaijiworldNews/PY): ಸಿಡಿ ಲೇಡಿಯ ತಾಯಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವತಿಯ ತಾಯಿಗೆ ಸಕ್ಕರೆ ಕಾಯಿಲೆ ಇದ್ದ ಕಾರಣ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಕ್ಕರೆ ಕಾಯಿಲೆ ತೀವ್ರಗೊಂಡ ಹಿನ್ನೆಲೆ ಯುವತಿ ತಾಯಿಯ ಕೈ-ಕಾಲು ಊದಿಕೊಂಡಿದೆ. ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದ ಕಾರಣ ಅವರ ಅರೋಗ್ಯದಲ್ಲಿ ಏರುಪೇರಾಗಿದೆ. ಸದ್ಯ ಅವರನ್ನು ಅವರ ಕುಟುಂಬದ ಸದಸ್ಯರು ಕಾರಿನಲ್ಲಿ ವಿಜಯಪುರಕ್ಕೆ ಕರೆತಂದಿದ್ದಾರೆ.
ಕಿರಿಯ ಪುತ್ರ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪೊಲೀಸ್ ಪೇದೆ ಭದ್ರತೆಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಯುವತಿಯ ಪೋಷಕರು ಬೆಳಗಾವಿ ನಗರದಿಂದ ವಿಜಯಪುರ ಜಿಲ್ಲೆಯ ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಜ್ಜಿಯ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಸಿಡಿ ಲೇಡಿಯ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡಾ ಯುವತಿಯ ಓರ್ವ ಸಹೋದರ, ತಂದೆ ಅಜ್ಜಿ ಮನೆಯಲ್ಲಿ ಉಳಿದಿದ್ದು, ಅವರಿಗೂ ಭದ್ರತೆ ನೀಡಲಾಗಿದೆ.