ಬೆಂಗಳೂರು, ಎ.05 (DaijiworldNews/PY): "ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಕಕ್ಷಿದಾರ ಸಹ ನಿಜವಾಗಿಯೂ ಸಂತ್ರಸ್ತ" ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್ ತಿಳಿಸಿದ್ದಾರೆ.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಅತ್ಯಾಚಾರ ಪ್ರಕರಣದ ಬಗ್ಗೆ ಸರಿಯಾಗಿ ತನಿಖೆಯಾಗುತ್ತಿಲ್ಲ. ಯುವತಿ ಸುಳ್ಳು ಆರೋಪ ಹಾಗೂ ಸುಳ್ಳು ದೂರು ನೀಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಜವಾಗಿಯೂ ನನ್ನ ಕಕ್ಷಿದಾರ ಸಂತ್ರಸ್ತ" ಎಂದಿದ್ದಾರೆ.
"ಇದು ಪೂರ್ವಯೋಜಿತ ಕೃತ್ಯವಾಗಿದ್ದು, ತನಿಖಾಧಿಕಾರಿಗಳ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ನಾನು ಸುಳ್ಳು ಆರೋಪದ ವಿರುದ್ದ ಕಾನೂನು ಹೋರಾಟ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.
"ನನ್ನ ಕಕ್ಷಿದಾರ ವಿಚಾರಣೆಯಿಂದ ತಪ್ಪಿಸಿಕೊಂಡಿಲ್ಲ. ಕಳೆದ ಬಾರಿ ವಿಚಾರಣೆಗೆ ಕರೆದ ಸಂದರ್ಭ ಅವರಿಗೆ ಅನಾರೋಗ್ಯವಿತ್ತು. ಹಾಗಾಗಿ ಅವರು ಗೋಕಾಕ್ ಆಸ್ಪತ್ರೆಗೆ ತೆರಳಿದ್ದರು. ಇದಾದ ಬಳಿಕ ವಿಚಾರಣಗೆ ಬರುವಂತೆ ತನಿಖಾಧಿಕಾರಿಗಳು ನೋಟಿಸ್ ನೀಡಿಲ್ಲ. ನೋಟಿಸ್ ನೀಡಿದಲ್ಲಿ ಅವರು ವಿಚಾರಣೆಗೆ ಹಾಜರಾಗುತ್ತಾರೆ. ಯಾರಾದೂ ಆಸ್ಪತ್ರೆಗೆ ಕಾರಣ ಇಲ್ಲದೇ ಹೋಗುತ್ತಾರಾ?. ಅವರು ಸರ್ಕಾರ ಆಸ್ಪತ್ರೆಗೆ ಹೋಗಿದ್ದು" ಎಂದಿದ್ದಾರೆ.