ಮುಂಬೈ, ಏ.05 (DaijiworldNews/HR): ಬಾಲಿವುಡ್ ನಟ ಅಕ್ಷಯ್ ಕುಮಾರ್ಗೆ ರವಿವಾರ ಕೊರೊನಾ ಸೋಂಕು ದೃಢಪಟ್ಟಿದ್ದು, ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನು ನಟ ಅಕ್ಷಯ್ ಕುಮಾರ್ ಅವರೊಂದಿಗೆ ರಾಮ್ಸೇತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದ 45 ಮಂದಿಯೂ ಕೊರೊನಾ ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ನಟ ಅಕ್ಷಯ್ ಕುಮಾರ್ , ನನಗೆ ನಿನ್ನೆ ಕೊರೊನಾ ದೃಢಪಟ್ಟಿದ್ದು, ವೈದ್ಯರ ಸಲಹೆಯಂದೆ ಇಂದು ಆಸ್ಫತ್ರೆಯಲ್ಲಿ ದಾಖಲಾಗಿದ್ದೇನೆ. ನನ್ನ ಮೇಲೆ ನಿಮ್ಮೆಲ್ಲರ ಹಾರೈಕೆ ಇದೇ ರೀತಿ ಇರಲಿ ಆದಷ್ಟು ಬೇಗ ನಾನು ಕರ್ತವ್ಯಕ್ಕೆ ಮರಳಲಿದ್ದೇನೆ" ಎಂದು ತಿಳಿಸಿದ್ದಾರೆ.