ಲಕ್ನೋ, ಎ.05 (DaijiworldNews/PY): "ರಾಜ್ಯದಲ್ಲಿ ಕಳೆದ 4 ವರ್ಷಗಳಲ್ಲಿ ಕಳ್ಳಭಟ್ಟಿ ಸೇವಿಸಿ ಸುಮಾರು 400 ಮಂದಿ ಸಾವನ್ನಪ್ಪಿದ್ದಾರೆ. ಉತ್ತರಪ್ರದೇಶಲ್ಲಿ ಸರ್ಕಾರ ಹಾಗೂ ಮದ್ಯ ಮಾಫಿಯಾ ನಡುವೆ ಬಾಂಧವ್ಯವಿದೆ" ಎಂದು ಕಾಂಗ್ರೆಸ್ ಆರೋಪಿಸಿದೆ.
ಸಾಂದರ್ಭಿಕ ಚಿತ್ರ
"ಕಳ್ಳಭಟ್ಟಿಯಿಂದ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 400 ಮಂದಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ, ಅಕ್ರಮ ಹಾಗೂ ಮದ್ಯ ತಯಾರಿಕೆಯು ಭೀತಿ ಹುಟ್ಟಿಸುವ ಪ್ರಮಾಣದಲ್ಲಿದೆ" ಎಂದು ಕಾಂಗ್ರೆಸ್ನ ಉತ್ತರಪ್ರದೇಶ ಘಟಕದ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ತಿಳಿಸಿದ್ದಾರೆ.
"ಸರ್ಕಾರ ಮಧ್ಯ ಮಾಫಿಯಾಕ್ಕೆ ರಕ್ಷಣೆ ನೀಡುತ್ತಿದೆ. ಕಳ್ಳಭಟ್ಟಿಯಿಂದ ನೂರಾರು ಸಾವು ಸಂಭವಿಸಿದರೂ ಕೂಡಾ ಜವಾಬ್ದಾರಿಯುತ ಹುದ್ದೆಗಳಲ್ಲಿರುವ ಅಧಿಕಾರಿಗಳು ಏಕೆ ಕ್ರಮ ತೆಗೆದುಕೊಂಡಿಲ್ಲ" ಎಂದು ಕೇಳಿದ್ದಾರೆ.