ನವದೆಹಲಿ, ಎ.05 (DaijiworldNews/PY): "ಛತ್ತೀಸ್ಘಡದಲ್ಲಿ ನಡೆದ ನಕ್ಸಲರ ವಿರುದ್ದದ ಯೋಧರ ಹೋರಾಟದಲ್ಲಿ ದೇಶ ಒಂದಾಗಿದೆ" ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಛತ್ತೀಸ್ಘಡದಲ್ಲಿ ನಡೆದ ನಕ್ಸಲರ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿರುವ ಯೋಧರಿಗೆ ಸಂತಾಪ ಸೂಚಿಸಿದ ಅವರು, "ದೇಶಕ್ಕಾಗಿ ತಮ್ಮ ಪ್ರಾಣ ನೀಡಿದ ಯೋಧರಿಗೆ ನಾನು ಗೌರವ ಸಲ್ಲಿಸುತ್ತೇನೆ. ಹುತಾತ್ಮ ಯೋಧರ ಕುಟುಂಬಕ್ಕೆ ದೇವರು ಸಾವಿನ ನೋವು ಭರಿಸುವ ಶಕ್ತಿ ನೀಡಲಿ. ಗಾಯಗೊಂಡ ಯೋಧರು ಶೀಘ್ರವೇ ಚೇತರಿಸಿಕೊಳ್ಳಲಿ" ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
"ನಕ್ಸಲ್ ವಿರುದ್ದ ಹೋರಾಟದಲ್ಲಿ ನಾವು ಒಂದಾಗಿದ್ದೇವೆ. ಛತ್ತೀಸ್ಘಡದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಅರೆಸೈನಿಕ ಪಡೆಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ" ಎಂದು ಹೇಳಿದ್ದಾರೆ.
ಛತ್ತೀಸ್ಘಡದಲ್ಲಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ 22 ಮಂದಿ ಯೋಧರು ಹುತಾತ್ಮರಾಗಿದ್ದಾರೆ