ಖಾನಾಕುಲ್, ಏ.04 (DaijiworldNews/HR): "ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ತೃಣಮೂಲ ಕಾಂಗ್ರೆಸ್ ಆಶ್ರಯ ಪಡೆದ ಗೂಂಡಾಗಳನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸಲಾಗುವುದು" ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಹೂಗ್ಲಿ ಜಿಲ್ಲೆಯ ಸುದರ್ಶನ್ ಪ್ರಮಾಣಿಕ್ ಸೇರಿದಂತೆ ಕೊಲೆಯಾದ ಬಿಜೆಪಿ ಕಾರ್ಯಕರ್ತರಿಗೆ ಬಮ್ಗಾಳದಲ್ಲಿ ಕೇಸರಿ ಪಕ್ಷ ಅಧಿಕಾರಕ್ಕೆ ಬಂದ ನಂತರ ನ್ಯಾಯ ಸಿಗಲಿದ್ದು, ಟಿಎಂಸಿ ಗೂಂಡಾಗಳೇ, ಎಚ್ಚರಿಕೆಯಿಂದ ಆಲಿಸಿ. ಮತಗಳ ಎಣಿಕೆಯ ನಂತರ, ನಾವು ನಿಮಗೆ ಪಾಠ ಕಲಿಸುತ್ತೇವೆ" ಎಂದರು.
"ಜನರನ್ನು ಹಿಂಸಿಸುವವರನ್ನು ನಾವು ಜೈಲಿಗೆ ಹಾಕಿದ್ದು, ಬಂಗಾಳದಲ್ಲಿ ಸಿಂಡಿಕೇಟ್ ರಾಜ್ನ (ಗೂಂಡಾ ರಾಜ್ಯ) ಭಾಗವಾಗಿರುವವರಿಗೆ ಮತ್ತು ಕಟ್ ಮನಿ (ಕಮಿಷನ್) ಬೇಡಿಕೆ ಇಡುವವರಿಗೆ ನಾವು ಶಿಕ್ಷೆ ವಿಧಿಸುತ್ತೇವೆ" ಎಂದು ಹೇಳಿದರು.
ಇನ್ನು "ಮಮತಾ 'ಜೈ ಶ್ರೀ ರಾಮ್' ಪಠಿಸುವುದಕ್ಕೆ 'ಅಲರ್ಜಿ'ಯಾಗುತ್ತದೆ. ಅವರಿಲ್ಲಿ ದುರ್ಗಾ ಪೂಜೆಗೆ ಅವಕಾಶ ನೀಡದ ರೀತಿಯಲ್ಲಿಯೇ ಅಯೋಧ್ಯೆಯಲ್ಲಿ ರಾಮ ದೇವಾಲಯವನ್ನು ನಿರ್ಮಿಸುವುದನ್ನು ಕೂಡ ವಿರೋಧಿಸುತ್ತಾರೆ" ಎಂದು ಹೇಳಿದ್ದಾರೆ.